ಮಾಲಿ: ಭಾರತ ವಿರೋಧಿ ನಿಲುವು ಹೊಂದಿದ್ದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಜು, ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು, ಭಾರತವನ್ನು ತಮ್ಮ ದೇಶದ ಪರಮಾಪ್ತ ದೇಶ ಎಂದು ಬಣ್ಣಿಸಿದ್ದಾರೆ. ತಮ್ಮ ದೇಶಕ್ಕೆ ಸಾಲ ಪರಿಹಾರ (ಸಾಲ ಮನ್ನ) ನೀಡಬೇಕು ಎಂದು ಮುಯಿುಝು ಮನವಿ ಮಾಡಿದ್ದಾರೆ.
2024 ವರ್ಷಾಂತ್ಯಕ್ಕೆ ಮಾಲ್ಡೀವ್ಸ್ ಭಾರತಕ್ಕೆ 400.9 ಮಿಲಿಯನ್ ಡಾಲರ್ ಗಳಷ್ಟು ಸಾಲ ಮರುಪಾವತಿ ಮಾಡಬೇಕಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮುಯಿಜು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಚೀನಾ ಪರ ಇರುವ ಮಾಲ್ಡೀವಿಯನ್ ನಾಯಕ ಭಾರತದ ಕಡೆಗೆ ಕಠಿಣ ನಿಲುವನ್ನು ಅನುಸರಿಸಿದ್ದಾರೆ ಮತ್ತು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಮೇ 10 ರೊಳಗೆ ತಮ್ಮ ದೇಶದಿಂದ ವಾಪಸು ಕಳುಹಿಸುವಂತೆ ಒತ್ತಾಯಿಸಿದ್ದರು. ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತವು ಪ್ರಮುಖವಾಗಿದೆ ಮತ್ತು “ಹೆಚ್ಚಿನ ಸಂಖ್ಯೆಯ” ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮುಯಿಝು ಹೇಳಿದ್ದಾರೆ.
ಭಾರತದ ಸೇನಾ ಸಿಬ್ಬಂದಿಯ ಮೊದಲ ಬ್ಯಾಚ್ ಈ ತಿಂಗಳು ದ್ವೀಪ ರಾಷ್ಟ್ರವನ್ನು ತೊರೆದ ನಂತರ ಭಾರತವನ್ನು ಮುಯಿಝು ಹೊಗಳಿದ್ದಾರೆ. ಮೇ 10 ರ ವೇಳೆಗೆ, ಮೂರು ಭಾರತೀಯ ವಾಯುಯಾನ ವೇದಿಕೆಗಳನ್ನು ನಿರ್ವಹಿಸುವ ಎಲ್ಲಾ 88 ಮಿಲಿಟರಿ ಸಿಬ್ಬಂದಿಗಳು ದೇಶವನ್ನು ತೊರೆಯಬೇಕೆಂದು ಮುಯಿಜ್ಜು ಒತ್ತಾಯಿಸಿದರು.