Connect with us

Hi, what are you looking for?

Diksoochi News

ರಾಷ್ಟ್ರೀಯ

ಸಾರ್ವಜನಿಕ ಸ್ಥಳದಲ್ಲಿ ಫೋನ್ ಚಾರ್ಜ್ ಮಾಡುತ್ತೀರಾ? ಕೇಂದ್ರ ಸರ್ಕಾರ ನೀಡಿದೆ ಎಚ್ಚರಿಕೆ..!

0

ಹೊಸದಿಲ್ಲಿ: ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್ ಮುಂತಾದ ಕಡೆ ನಿಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಹಾಕುತ್ತೀರಾ? ಎಲ್ಲಿಗೋ ಹೋಗಬೇಕಾದಾಗ, ಪ್ರಯಾಣದ ವೇಳೆ ಎಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಇವೆಯೋ ಅಲ್ಲಿ ಮೊಬೈಲ್ ಫೋನ್ ಚಾರ್ಜರ್ ಸಿಕ್ಕಿಸಿ, ಬ್ಯಾಟರಿ ತುಂಬಿಸುವುದು ಅನೇಕರಿಗೆ ಅಭ್ಯಾಸ. ದೂರು ಊರುಗಳಿಗೆ ಪ್ರಯಾಣಿಸಿದವರಿಗೆ ಇದು ಅನಿವಾರ್ಯವೂ ಹೌದು. ಫೋನ್ ಇಲ್ಲದಿದ್ದರೆ ಜೀವನವೇ ಇಲ್ಲ ಎಂಬಂತಾಗಿರುವ ಪರಿಸ್ಥಿತಿಯಲ್ಲಿ ಬ್ಯಾಟರಿ ಖಾಲಿಯಾದರೆ ಜೀವವೇ ಬಾಯಿಗೆ ಬಂದಂತಾಗುವುದು ಸಹಜ.

ಆದರೆ ವಿಮಾನ ನಿಲ್ದಾಣ, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಚಾರ್ಜಿಂಗ್ ಪೋರ್ಟಲ್‌ಗಳನ್ನು ಬಳಸದಂತೆ ನಾಗರಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. “ಯುಎಸ್‌ಬಿ ಚಾರ್ಜರ್ ಸ್ಕ್ಯಾಮ್” ಬಗ್ಗೆ ಜನರು ಜಾಗರೂಕರಾಗಿ ಇರುವಂತೆ ಅದು ತಿಳಿಸಿದೆ.

ಈ ಬಗ್ಗೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು ಪರಿಸ್ಥಿತಿ ಹಾಗೂ ಸ್ಪಂದನಾ ತಂಡ (ಸಿಇಆರ್‌ಟಿ- ಇನ್) ಮಾಹಿತಿ ನೀಡಿದೆ.

Advertisement. Scroll to continue reading.

ಈ ಎಚ್ಚರಿಕೆ ಏಕೆ?

ಸೈಬರ್ ಕ್ರಿಮಿನಲ್‌ಗಳು ಜನರಿಂದ ಡೇಟಾ ಹಾಗೂ ಹಣ ಕದಿಯಲು ಸಾವಿರಾರು ತಂತ್ರಗಳನ್ನು ಕಂಡುಕೊಂಡಿದ್ದಾರೆ. ವಿಮಾನ ನಿಲ್ದಾಣ, ಕೆಫೆಗಳು, ಬಸ್ ನಿಲ್ದಾಣ ಮತ್ತು ಹೋಟೆಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಜ್ಯೂಸ್ ಜಾಕಿಂಗ್

ವೈರಸ್ ಇರುವ ಯುಎಸ್‌ಬಿ ಸ್ಟೇಷನ್‌ಗಳಲ್ಲಿ ಚಾರ್ಜಿಂಗ್ ಉಪಕರಣಗಳನ್ನು ಬಳಸಿದರೆ, ಬಳಕೆದಾರರು ‘ಜ್ಯೂಸ್- ಜಾಕಿಂಗ್’ ಸೈಬರ್ ದಾಳಿಗಳಿಗೆ ತುತ್ತಾಗಬಹುದು. ಜ್ಯೂಸ್ ಜಾಕಿಂಗ್ ಎನ್ನುವುದು ಒಂದು ಸೈಬರ್ ದಾಳಿ ತಂತ್ರವಾಗಿದೆ. ಇದರಲ್ಲಿ ಸೈಬರ್ ಕ್ರಿಮಿನಲ್‌ಗಳು ಬಳಕೆದಾರರ ಡೇಟಾ ಕದಿಯಲು ಅಥವಾ ತಮ್ಮ ಉಪಕರಣಗಳಿಗೆ ಸಂಪರ್ಕಿಸಿರುವ ಮಾಲ್‌ವೇರ್‌ಗಳನ್ನು ಬಳಕೆದಾರರ ಸಾಧನಗಳಲ್ಲಿ ಇನ್‌ಸ್ಟಾಲ್ ಮಾಡಲು ಸಾರ್ವಜನಿಕ ಯುಎಸ್‌ಬಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಉಪಯೋಗಿಸುತ್ತಾರೆ.

ಈ ಬಗ್ಗೆ ಯಾವುದೇ ತಿಳಿವಳಿಕೆ ಅಥವಾ ಅನುಮಾನಗಳಿಲ್ಲದ ಬಳಕೆದಾರರು, ಈ ರೀತಿ ದುರ್ಬಳಕೆಯಾಗಿರುವ ಚಾರ್ಜಿಂಗ್ ಪೋರ್ಟ್‌ಗೆ ತಮ್ಮ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿದಾಗ ಸೈಬರ್ ಕ್ರಿಮಿನಲ್‌ಗಳು ಡೇಟಾಗಳನ್ನು ಕದಿಯುವ ಸಾಧ್ಯತೆ ಇರುತ್ತದೆ. ಅಥವಾ ಸಂಪರ್ಕಿಸಿದ ಉಪಕರಣದಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಬಹುದು. ಇದು ವೈಯಕ್ತಿಕ ವಿವರಗಳನ್ನು ಕದಿಯಲು, ಮಾಲ್‌ವೇರ್ ಅಥವಾ ರಾನ್ಸಮ್‌ವೇರ್‌ ಅಳವಡಿಸುವುದು ಮತ್ತು ಹಣ ಸುಲಿಗೆಯ ಕೃತ್ಯಗಳಿಗೆ ಸಹ ಬಳಕೆಯಾಗುವ ಅಪಾಯವಿದೆ.

ಸೈಬರ್ ವಂಚನೆಯ ಪ್ರಕರಣಗಳು ಗಮನಕ್ಕೆ ಬಂದಾಗ, ಅಂತಹ ಘಟನೆಗಳನ್ನು www.cybercrime.gov.in ವೆಬ್‌ಸೈಟ್‌ನಲ್ಲಿ ಅಥವಾ 1930ಗೆ ಕರೆ ಮಾಡುವ ಮೂಲಕ ತಿಳಿಸಿ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!