ನವದೆಹಲಿ : ಖ್ಯಾತ ಮಕ್ಕಳ ಪೇಯ ಬೋರ್ನ್‌ವಿಟಾವನ್ನು ಕೂಡಲೇ ‘ಹೆಲ್ತ್ ಡ್ರಿಂಕ್ಸ್’ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಎಲ್ಲಾ ಇ-ಕಾಮರ್ಸ್ ಸೈಟ್‌ಗಳಿಗೆ ಸೂಚನೆ ನೀಡಿದೆ. ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೌರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ‘ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ತೆಗೆದುಹಾಕುವಂತೆ ನಿರ್ದೇಶಿಸಿದೆ.
ಬೋರ್ನ್‌ವಿಟಾ ಅಧಿಕ ಸಕ್ಕರೆಯ ಮಟ್ಟವನ್ನು ಹೊಂದಿದ್ದು, ತೆಗೆದುಕೊಳ್ಳಬಹುದಾದ ಮಿತಿಗಳಿಗಿಂತ ಹೆಚ್ಚಿನದಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
Advertisement. Scroll to continue reading.
ಹಾಗಾಗಿ, ಈ ಪಾನೀಯಗಳು ಆರೋಗ್ಯಕರ ಪಾನೀಯಗಳಲ್ಲ ಎಂದು ತೀರ್ಮಾನಿಸಲಾಗಿದೆ.
Advertisement. Scroll to continue reading.