ಬೆಂಗಳೂರು: ಜನ ಮೆಚ್ಚುಗೆಯ ಹಾಗೂ ಅತ್ಯಂತ ಗುಣಮಟ್ಟದ ‘ನಂದಿನಿ ಹಾಲು’ ಉತ್ಪಾದನೆ ಮೂಲಕ ಮಾಡುವ ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಮ್‌ಎಫ್) ತನ್ನ ಛಾಪನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸಜ್ಜಾಗಿದೆ. ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಯೂರೋಪಿನ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಕೆಎಮ್‌ಎಫ್ ಪ್ರಾಯೋಜಕತ್ವ ಒದಗಿಸಲಿದ್ದು, ‘ನಂದಿನಿ ಡೈರಿ’ ಲೋಗೋ ತಂಡಗಳ ಸಮವಸ್ತ್ರಗಳ ಮೇಲೆ ರಾರಾಜಿಸಲಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಜೂನ್ 1ರಿಂದ 29ರವರೆಗೆ ನಡೆಯಲಿದೆ. ಈ ಬಾರಿಯ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ 20 ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಈ ಟೂರ್ನಿಯಲ್ಲಿ 2 ತಂಡಗಳಿಗೆ ಸ್ಪಾನ್ಸರ್‌ಷಿಪ್ ಒದಗಿಸುವುದರ ಜೊತೆಗೆ ಕೆಎಮ್‌ಎಫ್, ಟೂರ್ನಿ ವೇಳೆ ‘ವೇ ಪ್ರೋಟೀನ್’ ಹೊಂದಿರುವ ನಂದಿನಿ ಸ್ಪ್ಲಾಷ್ ಎನರ್ಜಿ ಡ್ರಿಂಕ್ ಅನ್ನು ಅಮೆರಿಕದ ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎಂದು ಕೆಎಮ್‌ಎಫ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ ಜೂನ್ 29ರವರೆಗೆ ಟೂರ್ನಿ ನಡೆಯಲಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯಗಳು ಅಮೆರಿಕದ ನೆಲದಲ್ಲಿ ನಡೆಯಲಿವೆ.