Connect with us

Hi, what are you looking for?

Diksoochi News

ರಾಜ್ಯ

ಮೋದಿ ತೀರಿಕೊಂಡ್ರೆ ಯಾರೂ ಪಿಎಂ ಆಗೋದೇ ಇಲ್ವಾ?: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ

0

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರ ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್ ಶಾಸಕ ರಾಜು ಕಾಗೆ ವಿವಾದ ಹುಟ್ಟು ಹಾಕಿದ್ದಾರೆ.

ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ? ಎಂದು ಹೇಳಿದ್ದಾರೆ. ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಂಗಳವಾರ ನಡೆದಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತೀರಿಕೊಂಡರೆ ಪ್ರಧಾನಿ ಅಭ್ಯರ್ಥಿ ಇಲ್ಲವೇ? 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೇ? ಎಂದು ಹೇಳಿದರು.

ಈಗಿನ ಯುವಕರು ಮೋದಿ ಮೋದಿ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಮತದಾರುರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ನೀವೇನು ಪ್ರಧಾನಿ ಮೋದಿಯವರನ್ನು ತೆಗೆದುಕೊಂಡು ನೆಕ್ಕುತ್ತೀರಾ? ಇಲ್ಲಿ ಯಾವುದೇ ಸಮಸ್ಯೆ ಆದರೂ ಪ್ರಧಾನಿ ಮೋದಿ ಬರಲ್ಲ, ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿಗೆ 3 ಸಾವಿರ ಕೋಟಿ ರೂ. ವಿಮಾನ ಇದೆ. ನರೇಂದ್ರ ಮೋದಿ 4 ಲಕ್ಷ ರೂ. ಸೂಟ್ ಹಾಕಿಕೊಳ್ಳುತ್ತಾರೆ ಎಂದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!