ನವದೆಹಲಿ : ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ಹಿನ್ನಡೆಯಾಗಿದೆ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂಬೈ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮಲ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಸುಪ್ರೀಂನಲ್ಲೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆಸ್ತಿ ಮುಟ್ಟುಗೋಲು ಮಾರ್ಗವು ಈಗ ಹೆಚ್ಚು ಸ್ಪಷ್ಟವಾಗಿದೆ.
ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು ಮತ್ತು ಅವರ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲು ಮುಂಬೈ ನ್ಯಾಯಾಲಯ ತೆಗೆದುಕೊಂಡ ಕ್ರಮವನ್ನ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಮಯದಲ್ಲಿ, ಮಲ್ಯ ಅವರ ವಕೀಲರು ತಮ್ಮ ಕಕ್ಷಿದಾರರಿಂದ ಯಾವುದೇ ಮಾಹಿತಿಯನ್ನ ಸ್ವೀಕರಿಸಿಲ್ಲ. ಅವರು ಸ್ವತಃ ಕತ್ತಲೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಈ ಪ್ರಕರಣದಲ್ಲಿ ಮಲ್ಯಗೆ ಹಿನ್ನಡೆಯಾಗುವುದು ಖಚಿತವಾಗಿತ್ತು. ಏಕೆಂದರೆ ಅವರ ಪರವಾಗಿ ಹೋರಾಡುವ ವಕೀಲರು ಅನೇಕ ವಿಷಯಗಳ ಬಗ್ಗೆ ಸ್ಪಷ್ಟವಾಗಿರಲಿಲ್ಲ.
2019 ರ ಜನವರಿ 5 ರಂದು ಬಾಂಬೆ ಹೈಕೋರ್ಟ್‌ನ ವಿಶೇಷ ಸೆಲ್ ನೀಡಿದ್ದ ತೀರ್ಪಿನಲ್ಲಿ ವಿಜಯ್ ಮಲ್ಯ ಅವರನ್ನು ಪರಾರಿ ಎಂದು ಘೋಷಣೆ ಮಾಡಿತ್ತು. ಪರಾರಿ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿಯನ್ನು ಕೋರ್ಟ್ ಫುಗೆಟಿವ್ ಅಥವಾ ಆರ್ಥಿಕ ಅಪರಾಧ ಮಾಡಿ ಪರಾರಿ ಎಂದು ಘೋಷಣೆ ಮಾಡಿದ್ದಲ್ಲಿ, ತನಿಖಾ ಸಂಸ್ಥೆಗಳಿಗೆ ಅವರ ಆಸ್ತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿರುತ್ತದೆ. ಹೊಸ ಕಾನೂನಿನ ಅಡಿಯಲ್ಲಿ ತನ್ನನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಇಡಿ ಸಲ್ಲಿಸಿದ ಮನವಿಯ ಮೇಲೆ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ವಿಚಾರಣೆಗೆ ತಡೆ ನೀಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಲ್ಯ 2019 ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಈಗ ತಿರಸ್ಕರಿಸಲಾಗಿದೆ. 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದ ಮಲ್ಯ 2016ರಲ್ಲಿ ಇಂಗ್ಲೆಂಡ್‌ಗೆ ಪರಾರಿಯಾಗಿದ್ದರು.
