Connect with us

Hi, what are you looking for?

Diksoochi News

ರಾಜ್ಯ

ಹಿಂದೂ ಕಾರ್ಯಕರ್ತರು ಗತಿಯಿಲ್ಲದ ಭಿಕ್ಷುಕರು: ಕಾಂಗ್ರೆಸ್ ಶಾಸಕನ ಉದ್ಧಟತನದ ಹೇಳಿಕೆ

0

ಬೆಳಗಾವಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸಾವಿನ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ರಾಜು ಕಾಗೆ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಿಗೆ ಬಿಕಾರ್‌ಚೋಟ್ ಅಂದ್ರೆ ಗತಿ ಇಲ್ಲದ ಭಿಕ್ಷುಕರು ಎಂದು ಶಾಸಕ ರಾಜು ಕಾಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ನಡೆಸಿ ಮಾತನಾಡಿದ ಕಾಗೆ, ರಾಮಮಂದಿರ ನಿರ್ಮಾಣದಿಂದ ದೇಶದ ಜನತೆ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ.

ಜನರ ಸಮಸ್ಯೆಗಳಿಗೆ ಪರಿಹಾರ ನೀಡಿದರೆ ನಾವೂ ದೇವಸ್ಥಾನಗಳನ್ನು ನಿರ್ಮಿಸುತ್ತೇವೆ. ಬಿಜೆಪಿ ಕಾರ್ಯಕರ್ತರಿಗೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ಮಾತ್ರ ಗೊತ್ತು. ನಾನು ಇದನ್ನೆಲ್ಲ 40 ವರ್ಷಗಳ ಹಿಂದೆ ಮಾಡಿದ್ದೇನೆ. ನಾನು ಅವರಿಗೆ ಉತ್ತರಿಸಲು ಸಿದ್ಧ ಮತ್ತು ಸಮರ್ಥನಾಗಿದ್ದೇನೆ. ಆದರೆ ಅದು ನನ್ನ ಮಟ್ಟದಲ್ಲಿಲ್ಲ. ಅವರು ಬಿಕಾರ್ ಜೋಟ್ ಗಳು, ಹೀಗಾಗಿ ಜನರು ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಬೇಕು.

Advertisement. Scroll to continue reading.

ಏತನ್ಮಧ್ಯೆ, ಕರ್ನಾಟಕ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರು ಶ್ರೀಕೃಷ್ಣನ ಹೆಸರನ್ನು ತೆಗೆದುಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ನಂತರ, ಬಿಜೆಪಿ ನಾಯಕರು ಸೇರಿದಂತೆ ಹಲವರು ತರಾಟೆಗೆ ತೆಗೆದುಕೊಂಡರು.

ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತಿಮ್ಮಾಪುರ್, ಬಹುಶಃ ಜೆಡಿಎಸ್ ನಾಯಕ ಶ್ರೀಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು ಎಂಬ ಹೇಳಿಕೆ ನೀಡಿದ್ದರು. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, “ತಿಮ್ಮಾಪುರ್ ಅವರ ಹಿಂದೂ ದ್ವೇಷ ಎಷ್ಟು ವ್ಯಾಪಕವಾಗಿದೆ ಎಂದರೆ ಅವರು ಭಗವಾನ್ ಕೃಷ್ಣ ಅವರ ಹೆಸರನ್ನು ಎಳೆದು ತಂದಿದ್ದಾರೆ. ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಮನ ವಿರುದ್ಧ ಶಿವನ ಬಗ್ಗೆ ಹೇಳಿಕೆ ನೀಡಿದ್ದರು. ಹಿಂದೂ ದೇವತೆಗಳು ಮತ್ತು ಧರ್ಮವನ್ನು ಕಾಂಗ್ರೆಸ್‌ ನಿಂದ ದೂರ ಇಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಏತನ್ಮಧ್ಯೆ, ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಅನೇಕ ನೆಟಿಜನ್‌ಗಳು ತಿಮ್ಮಾಪುರ್ ವಿರುದ್ಧ ವಾಗ್ದಾಳಿ ನಡೆಸಿದರು

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!