ಸುರಪುರ: ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯ ತೆರೆದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆಗೆ ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಕೆಯ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಏನಾದರೂ ಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಬೇಕು, ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನೋಡುತ್ತಿರಿ.. ಸಿದ್ದರಾಮಯ್ಯನವರ ಮೇಲೂ ಏನಾದರೂ ಭ್ರಷ್ಟಾಚಾರ ಆರೋಪ ಹೊರಿಸುತ್ತಾರೆ. ಸಿದ್ರಾಮಣ್ಣ ನಿಮ್ಮ ಶತ್ರು ಬಿಜೆಪಿಯಲ್ಲ, ನಿಮ್ಮ ಬಗಲಲ್ಲೇ ಇರುವ ಡಿಕೆಶಿ ಎಂದು ಬಿಜೆಪಿಯ ಮಾಜಿ ಶಾಸಕ ರಾಜೂ ಗೌಡ ಆರೋಪಿಸಿದ್ದಾರೆ
ಹೀಗೆ ಮಾಡಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ತಯಾರಿಸಿಕೊಂಡು ಮನೆಗೆ ಕಳುಹಿಸಿದರು. ಸಮಯ ಬಂದಾಗ ಎದುರಾಳಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಈಗ ಪ್ರಜ್ವಲ್, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊನ್ನೆ ರಾಹುಲ್ ಗಾಂಧಿ, ಡಿಕೆಶಿ ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ರಾಜ್ಯಾಧ್ಯಕ್ಷ ಎಂದು ಹೇಳಿದ್ದರು. ಅವರ ಮನಸ್ಸಿನಲ್ಲೂ ಅದೇ ಇದೆ, ಡಿಕೆಶಿ ಅಣ್ಣ 24 ಗಂಟೆ ರಾಜಕೀಯ ಮಾಡುವ ವ್ಯಕ್ತಿ. ಮುಖ್ಯಮಂತ್ರಿ ಆಗುವುದಕ್ಕೆ ಬೇಕಾದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
ನೋಡುತ್ತಿರಿ.. ಲೋಕಸಭಾ ಚುನಾವಣೆ ಮುಗಿಯಲಿ, ಸಿದ್ರಾಮಣ್ಣನ ವಿರುದ್ದವೂ ಏನಾದರೂ ಸಿಡಿ ಬಿಡುತ್ತಾರೆ. ಅವರ ಜೊತೆ ಜಾಸ್ತಿ ಓಡಾಡೋಕೆ ಹೋಗಬೇಡಿ ” ಎಂದು ರಾಜೂ ಗೌಡ ಸಿಎಂಗೆ ಎಚ್ಚರಿಸಿದ್ದಾರೆ.