Connect with us

Hi, what are you looking for?

Diksoochi News

ಸಿನಿಮಾ

ಗುಡ್ ನ್ಯೂಸ್ ಹಂಚಿಕೊಂಡ ಲಕ್ಷ್ಮೀಬಾರಮ್ಮ ಖ್ಯಾತಿಯ ಕವಿತಾ ಗೌಡ – ಚಂದನ್ ದಂಪತಿ

0

ಕನ್ನಡ ಕಿರುತೆರೆಯಲ್ಲಿ ಅನೇಕ ತಾರಾ ಜೋಡಿಗಳಿದ್ದಾರೆ. ಅವರಲ್ಲಿ ಲಕ್ಷ್ಮೀಬಾರಮ್ಮ ಖ್ಯಾತಿಯ ಚಂದನ್ ಮತ್ತು‌ ಕವಿತಾ ಗೌಡ ದಂಪತಿಗಳೂ ಫೇಮಸ್.  ಈ ಮುದ್ದಾದ ಜೋಡಿ ಈಗ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಚಂದನ್ ಗೌಡ ಮತ್ತು ಕವಿತಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಚಾರ ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ತಿಳಿಸಿದ್ದಾರೆ.

ಕವಿತಾ ಗೌಡ ಮತ್ತು ಚಂದನ್ ಕುಮಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದರು. ಧಾರಾವಾಹಿಯ ಸಮಯದಲ್ಲಿ ಶುರುವಾದ ಇಬ್ಬರು ನಟರ ಸ್ನೇಹ, ಪ್ರೀತಿಯಾಗಿ ಬದಲಾಗಿತ್ತು. ಬಳಿಕ ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ವಿವಾಹವಾಗಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Advertisement. Scroll to continue reading.

ನಟ ಚಂದನ್‌ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು 14 ಮೇ 2021ರಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದನ್ ಗೌಡ ಮತ್ತು ಕವಿತಾ ಅವರು ರೆಸ್ಟೋರೆಂಟ್, ಹೋಟೆಲ್ ಓಪನ್ ಮಾಡಿ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!