ಮಂಗಳೂರು: ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ಬಂಟ್ವಾಳದ ನಾವೂರಿನಲ್ಲಿ ನಡೆದಿದೆ.
ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಆಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ನಾಶಿಯಾ (14) ನೀರುಪಾಲದ ಬಾಲಕಿಯರು. ಮಕ್ಕಳೊಂದಿಗೆ ಪೋಷಕರು ನೇತ್ರಾವತಿ ನದಿ ತೀರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಈಜು ಬಾರದ ಕಾರಣ ಕಣ್ಣ ಮುಂದೆ ಮಕ್ಕಳು ನೀರು ಪಾಲಾಗುತ್ತಿದ್ದರೂ ಪೋಷಕರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.