Connect with us

Hi, what are you looking for?

Diksoochi News

ರಾಷ್ಟ್ರೀಯ

ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು ಇಲ್ಲವಾದರೆ ಅಣುಬಾಂಬ್ ದಾಳಿ ನಡೆಸಬಹುದು: ಕಾಂಗ್ರೆಸ್ ನಾಯಕ

1

ದೆಹಲಿ: ಭಾರತವು ಪಾಕಿಸ್ತಾನವನ್ನು ಗೌರವಿಸಬೇಕೇ ಹೊರತು ತನ್ನ ಸೇನಾ ಬಲವನ್ನು ಹೆಚ್ಚಿಸಬಾರದು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ವಿವಾದ ಸೃಷ್ಟಿಸಿದ್ದಾರೆ. ನಾವು ಪಾಕಿಸ್ತಾನಕ್ಕೆ ಗೌರವ ನೀಡದಿದ್ದರೆ ಅವರು ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ.

ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿರುತ್ತದೆ, ಆದರೆ ಭಯೋತ್ಪಾದನೆ ಮಾತುಕತೆಯಿಂದ ಮಾತ್ರ ಕೊನೆಗೊಳ್ಳುತ್ತದೆ ಎಂದು ಹೇಳಿದರು.

ಭಾರತ ಸರ್ಕಾರ ಬಯಸಿದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಹುದು, ಆದರೆ ನೆರೆಯ ದೇಶವನ್ನು ಗೌರವಿಸದಿದ್ದರೆ ಭಾರೀ ಬೆಲೆ ತೆರೆಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

Advertisement. Scroll to continue reading.

ಕೆಲವು ಹುಚ್ಚರು ಲಾಹೋರ್ ನಲ್ಲಿ ಬಾಂಬ್ ಸ್ಫೋಟಿಸಲು ನಿರ್ಧರಿಸಿದರೆ, ಪಾಕ್ನವರಿಗೆ ಅಮೃತಸರವನ್ನು ತಲುಪಲು 8 ಸೆಕೆಂಡುಗಳಲ್ಲೂ ತೆಗೆದುಕೊಳ್ಳುವುದಿಲ್ಲ ಎಂದು ಎಚ್ಚಿರಿಸಿದರು. ನಾವು ಅವರಿಗೆ ಗೌರವ ನೀಡದಿದ್ದರೆ ಅವರು ಭಾರತದ ವಿರುದ್ಧ ಅಣುಬಾಂಬ್ ಪ್ರಯೋಗಿಸಲು ಯೋಚಿಸುತ್ತಾರೆ.

ನಾವು ಅವರನ್ನು ಗೌರವಿಸಿದರೆ ಅವರು ಶಾಂತಿಯಿಂದ ಇರುತ್ತಾರೆ, ಧಿಕ್ಕಿರಿಸಿದರೆ ಭಾರತದ ವಿರುದ್ಧ ಅಣುಬಾಂಬ್​ ದಾಳಿ ನಡೆಸುತ್ತಾರೆ. ದ್ವೇಷ ಸಾಧಿಸಿ ಅಥವಾ ಬಂದೂಕು ತೋರಿಸಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನವೂ ಸಾರ್ವಭೌಮ ರಾಷ್ಟ್ರ ಅದಕ್ಕೂ ಗೌರವವಿದೆ ಎಂದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!