Connect with us

Hi, what are you looking for?

Diksoochi News

ರಾಷ್ಟ್ರೀಯ

ಬಿಜೆಪಿ ಹಿನ್ನಡೆಗೆ ಬಲವಾದ ಕಾರಣವಿಲ್ಲ, 300ರ ಆಸುಪಾಸಿನಲ್ಲಿ ಸ್ಥಾನಗಳಿಸಲಿದೆ: ಪ್ರಶಾಂತ್ ಕಿಶೋರ್

0

ದೆಹಲಿ: ಚುನಾವಣಾ ಸ್ಪೆಷಲಿಸ್ಟ್ ಪ್ರಶಾಂತ್ ಕಿಶೋರ್, ನಾಲ್ಕನೇ ಹಂತದ ಮತದಾನ ಮುಗಿದ ನಂತರ, ಚುನಾವಣಾ ಭವಿಷ್ಯವನ್ನು ನುಡಿದಿದ್ದು, ಕೇಸರಿ ಪಡೆಯ ಹಿನ್ನಡೆಗೆ ಬಲವಾದ ಕಾರಣವಿಲ್ಲ, ಬಿಜೆಪಿ ಮುನ್ನೂರರ ಗಡಿಯನ್ನು ಸಲೀಸಾಗಿ ದಾಟಲಿದೆ ಎಂದಿದ್ದಾರೆ.

ಉತ್ತರ ಮತ್ತು ಪಶ್ಚಿಮದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ, ಆದರೆ ಆ ರೀತಿಯಾಗಲು ಸೂಕ್ತವಾದ ಕಾರಣವಿಲ್ಲ. ಇನ್ನು, ದೇಶದ ಪೂರ್ವ ಮತ್ತು ದಕ್ಷಿಣದ ಭಾಗದಲ್ಲಿ ಬಿಜೆಪಿಯ ವೋಟ್ ಶೇರ್ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಜೆಪಿಯ ಇದುವರೆಗಿನ ಅವಧಿಯ ಯಾವುದೇ ಪಾಸಿಟೀವ್ ಅಥವಾ ನೆಗೆಟೀವ್ ಆಡಳಿತಾತ್ಮಕ ಅಂಶಗಳು ಈ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಬಾವ ಬೀರಲಿದೆ ಎಂದು ನನಗನಿಸುವುದಿಲ್ಲ. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಕಳೆದುಕೊಳ್ಳಬಹುದಾದ ಸ್ಥಾನವನ್ನು ಬಿಜೆಪಿ ಇತರ ಕಡೆ ಗಳಿಸಿಕೊಳ್ಳಲಿದೆ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement. Scroll to continue reading.

ಪಶ್ಚಿಮ ಬಂಗಾಳ, ಒಡಿಸ್ಸಾ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿಯ ಸಾಧನೆ ಉತ್ತಮವಿರಲಿದೆ ಎಂದು ಅಭಿಪ್ರಾಯ ಪಟ್ಟಿರುವ ಪ್ರಶಾಂತ್ ಕಿಶೋರ್, ತೆಲಂಗಾಣದಲ್ಲಿ ಬಿಜೆಪಿ ಆರರಿಂದ ಒಂಬತ್ತು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಮೊದಲ ಬಾರಿಗೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಬಿಜೆಪಿ 370 ಮತ್ತು ಎನ್‌ಡಿಎ ಮೈತ್ರಿಕೂಟ 400ರ ಗಡಿ ದಾಟಲಿದೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿ ಮೈತ್ರಿಕೂಟ ಅಷ್ಟು ಸ್ಥಾನ ಗೆಲ್ಲುವ ಸಾಧ್ಯತೆಯಿದೆಯಾ ಎನ್ನುವುದರ ಬಗ್ಗೆ ಚರ್ಚೆಯಾಯಿತು. ಯಾರೂ, ಬಿಜೆಪಿ ಗೆಲ್ಲುತ್ತಾ ಅಥವಾ ಸೋಲುತ್ತಾ ಎನ್ನುವ ಬಗ್ಗೆ ಮಾತನಾಡಿಲ್ಲ. ಇದು, ಬಿಜೆಪಿಯ ಚುನಾವಣಾ ತಂತ್ರಗಾರಿಕೆಯ ಭಾಗ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಹೇಳುವ ಹಾಗೇ, ಬಿಜೆಪಿ ಇನ್ನೂರು ಸೀಟ್ ದಾಟುವುದಿಲ್ಲ ಎಂದು ಹೇಳುತ್ತಿದೆ. ಈ ರೀತಿ ಆಗಬೇಕಾದರೆ, ಬಿಜೆಪಿ ಉತ್ತರ ಮತ್ತು ಪಶ್ಚಿಮದಲ್ಲಿ ನೂರು ಸ್ಥಾನವನ್ನು ಕಳೆದುಕೊಳ್ಳಬೇಕು. ಆ ರೀತಿ ಆಗುವ ಗ್ರೌಂಡ್ ರಿಯಾಲಿಟಿ ಸದ್ಯ ನನಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!