ನವದೆಹಲಿ: ಟೀಂ ಇಂಡಿಯಾದ ಖ್ಯಾತ ಆಟಗಾರ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಪುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ. ಜೂನ್ 6 ರಂದು ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ ತನ್ನ ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮೂಲಕ 39 ವರ್ಷದ ಛೆಟ್ರಿ ವಿದಾಯದ ನಿರ್ಧಾರವನ್ನು ತಿಳಿಸಿದರು.
ಛೆಟ್ರಿ ಮಾರ್ಚ್‌ನಲ್ಲಿ ಭಾರತಕ್ಕಾಗಿ ತಮ್ಮ 150 ನೇ ಪಂದ್ಯ ಆಡಿದ್ದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಆದರೆ ಆ ಪಂದ್ಯವನ್ನು ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.
Advertisement. Scroll to continue reading.
ನಾನು ವೈಯಕ್ತಿಕವಾಗಿ ಆಡಿಲ್ಲ. ದೇಶಕ್ಕಾಗಿ ಆಡಿದ್ದೇನೆ. ನಾನು ರಾಷ್ಟ್ರೀಯ ತಂಡದೊಂದಿಗಿನ ಪ್ರತಿಯೊಂದು ತರಬೇತಿಯನ್ನು ನಾನು ಆನಂದಿಸಲು ಬಯಸುತ್ತೇನೆ. ಕುವೈತ್ ವಿರುದ್ಧದ ಪಂದ್ಯಕ್ಕೆ ಒತ್ತಡವಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ ಎಂದು ಛೆಟ್ರಿ ಹೇಳಿದರು.
In this article:Diksoochi news, FIFA, Football, Indian football, sports, Sunil chhetri, ಫುಟ್ಬಾಲ್, ಸುನಿಲ್ ಛೆಟ್ರಿ
Click to comment