Connect with us

Hi, what are you looking for?

Diksoochi News

ಇತರೆ

ಎಚ್ಚರ: ಎಪಿಕೆ ಫೈಲ್ ಕಳುಹಿಸಿ ವಂಚನೆ; ಡೌನ್‌ಲೋಡ್‌ ಮಾಡಿದ್ರೆ ನಿಮ್ಮ ಹಣ ಮಾಯ

0

ತಂತ್ರಜ್ಞಾನ ಕ್ಷೇತ್ರದಲ್ಲಿಯ ಹೊಸ ಹೊಸ ಆವಿಷ್ಕಾರಗಳೊಂದಿಗೆ, ಸೈಬರ್ ವಂಚನೆಯೂ ಸಹ ಅಷ್ಟೆ ಮಿತಿ ಮೀರುತ್ತಿದೆ. ಒಂದು ವಿಧಾನದ ಕಳ್ಳತನಕ್ಕೆ ಬ್ರೇಕ್‌ ಹಾಕುವಷ್ಟರಲ್ಲಿ ಮತ್ತೊಂದು ವಿಧಾನವನ್ನು ಈ ಸೈಬರ್‌ ವಂಚಕರು ಕಂಡುಕೊಳ್ಳುತ್ತಿದ್ದಾರೆ. ಇದು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವ ಹಲವು ಮಾರ್ಗಗಳನ್ನು ಸೈಬರ್‌ ವಂಚಕರು ಕಂಡುಕೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿಯೇ ಸುಮಾರು 10,300 ಕೋಟಿ ರೂ ಅನ್ನು ಸೈಬರ್ ಖದೀಮರು ಬ್ಯಾಂಕ್‌ ಖಾತೆಗೆ ಖನ್ನ ಹಾಕಿ ದೋಚಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ವರದಿ ನೀಡಿದೆ.

ಜನರ ಬ್ಯಾಂಕ್‌ ಹಣ ಕದಿಯುವಲ್ಲಿ ಸೈಬರ್ ವಂಚಕರು ಈಗ ಹೆಚ್ಚಾಗಿ ಬಳಸುತ್ತಿರುವ ವಿಧಾನದಲ್ಲಿ – ಕೆವೈಸಿ ಅಪ್‌ಡೇಟ್‌ ಮಾಡುವುದಾಗಿ ಹೇಳಿ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ ಲಿಂಕ್‌ ಅನ್ನು ಮೆಸೇಜ್‌ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವುದು ಈಗ ಹೆಚ್ಚಾಗಿದೆ.

ಹೇಗೆಲ್ಲಾ ವಂಚನೆ ನಡೆಯುತ್ತದೆ?

ಪ್ರಮುಖ ಬ್ಯಾಂಕ್‌ಗಳ ಲೋಗೋ ಬಳಸಿ ಬ್ಯಾಂಕಿಂಗ್ ಅಪ್ಲಿಕೇಶನ್ ಸೃಷ್ಟಿಸಲಾಗುತ್ತದೆ.
ಕಸ್ಟಮರ್ ಸರ್ವೀಸ್‌ ಪಾಯಿಂಟ್ ಎಂಬ ನಕಲಿ ಅಪ್ಲಿಕೇಶನ್‌ ಪ್ಯಾಕೇಜ್‌ಗಳನ್ನು ಸೃಷ್ಟಿಸಿಕೊಂಡು, ಅದನ್ನ ಡೌನ್‌ಲೋಡ್‌ ಮಾಡಿಸುವ ಪ್ರಯತ್ನ ಮಾಡುತ್ತಾರೆ.
ವಾಟ್ಸಾಪ್, ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ವಂಚನೆ ಸಾಧ್ಯ. ಅವುಗಳ ಮುಖಾಂತರ ನಕಲಿ ಎಪಿಕೆ ಫೈಲ್‌ ಅನ್ನು ಕಳುಹಿಸುತ್ತಾರೆ.
ನಿಮ್ಮ ಮೊಬೈಲ್ ನಲ್ಲಿ ಮೊದಲು ಆ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿಸುತ್ತಾರೆ. ಆಧಾರ್‌ ಕೆವೈಸಿ, ಪಾನ್‌ಕಾರ್ಡ್‌ ವಿವರ, ನಂಬರ್ ಅಪ್‌ಡೇಟ್‌ ಮಾಡಿಸುತ್ತಾರೆ. ನಂತರ ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಆಗುತ್ತಿದ್ದಂತೆ ಖಾತೆ ವಿವರ ಪಡೆಯುತ್ತಾರೆ. ಆಮೇಲೆ ನೇರವಾಗಿ ಬ್ಯಾಂಕ್‌ ಖಾತೆಯಲ್ಲಿನ ನಿಮ್ಮ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ.

Advertisement. Scroll to continue reading.

ಹಣ ಕಳವಾದರೆ ಏನು ಮಾಡಬೇಕು?

ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಮೋಸ ಹೋದರೆ ಅಂದೇ ಸೈಬರ್ ಪೊರ್ಟಲ್ ಅಥವಾ ಸೈಬರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು.
#67# ಗೆ ಡಯಲ್ ಮಾಡಿ ಮೊಬೈಲ್ ಸಂಖ್ಯೆ ಸುರಕ್ಷಿತಗೊಳಿಸಿ.
ಸೈಬರ್ ವಂಚನೆಗೆ ತುತ್ತಾದವರು ತಕ್ಷಣ ಕರೆ ಮಾಡಿ ದೂರು ಕೊಡಲು ನಂಬರ್ – 1930.

ಮುನ್ನೆಚ್ಚರಿಕೆ ಅಗತ್ಯ

ಅನುಮಾನಾಸ್ಪದ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಬಾರದು, ಇನ್‌ಸ್ಟಾಲ್‌ ಮಾಡುವುದು ಬೇಡ.
ಇನ್‌ಸ್ಟಾಲ್‌ ಆಗಿಬಿಟ್ಟಿದ್ದರೆ, ತಕ್ಷಣ ಇಂಟರ್‌ನೆಟ್‌ ಡಾಟಾ ಆಫ್‌ ಮಾಡಿ, ನಂತರ ಆ ಅಪ್ಲಿಕೇಶನ್‌ ಅನ್‌ಇನ್‌ಸ್ಟಾಲ್‌ ಮಾಡಿ. ಆ ಅಪ್ಲಿಕೇಶನ್‌ನ ಕ್ಯಾಚಿ ಕ್ಲಿಯರ್ ಮಾಡಿ.
ಮೊಬೈಲ್ ಸೆಟ್ಟಿಂಗ್‌ನಲ್ಲಿ ಅಪ್ಲಿಕೇಶನ್‌ ಮ್ಯಾನೇಜ್ಮೆಂಟ್ / ಆಪ್ಸ್‌, ಡೌನ್‌ಲೋಡ್‌ ಪರಿಶೀಲನೆ ಮಾಡಿ.
ಒಂದು ವೇಳೆ ಅಪರಿಚಿತ ಫೈಲ್‌ಗಳು ಇದ್ದರೆ ಅವುಗಳನ್ನು ಡಿಲೀಟ್‌ ಮಾಡಿ, ಮೊಬೈಲ್‌ ನಲ್ಲಿ ಕ್ಲೀನ್‌ ಟೂಲ್‌ ಇದ್ದರೆ ಬಳಸಿಕೊಳ್ಳಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!