ಉಡುಪಿ: ಸಿಟಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ಬುಧವಾರ (ಮೇ.29) ಸಂಜೆ ನಡೆದಿದೆ.
ಈಶ್ವರ ನಗರದ ನಿವಾಸಿ ಮಹಾಬಲ ಶೆಟ್ಟಿಗಾರ್ (78) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ.
ಬಸ್ ಮಣಿಪಾಲದಿಂದ ಪರ್ಕಳದತ್ತ ತೆರಳುತ್ತಿತ್ತು. ಈ ಸಂದರ್ಭ ರಸ್ತೆ ದಾಟುತ್ತಿದ್ದ ಮಹಾಬಲ ಅವರಿಗೆ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಮಹಾಬಲ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Advertisement. Scroll to continue reading.
ಅಪಘಾತದ ಸಂದರ್ಭದಲ್ಲಿ ಈ ಭಾಗದಲ್ಲಿ ಸಂಪೂರ್ಣ ಟ್ರಾಫಿಕ್ ದಟ್ಟನೆ ಉಂಟಾಗಿದ್ದು, ಘಟನಾ ಸ್ಥಳಕ್ಕೆ ಮಣಿಪಾಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Advertisement. Scroll to continue reading.