Connect with us

Hi, what are you looking for?

Diksoochi News

ರಾಷ್ಟ್ರೀಯ

ಭಾರತದ ಗಡಿ ಸಮೀಪ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜಿಸಿದ ಚೀನಾ!

0

ಬೀಜಿಂಗ್: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನವು ತನ್ನ ರಕ್ಷಣಾ ಬಲ ಹೆಚ್ಚಿಸಿಕೊಳ್ಳಲು ಚೀನಾ ನೆರವು ನೀಡಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿರುವ ಹೊತ್ತಿನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸಿಕ್ಕಿಂನಲ್ಲಿ ಭಾರತದ ಗಡಿಯಿಂದ ಸುಮಾರು 150 ಕಿಮೀ ದೂರದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಭದ್ರತೆಗೆ ನಿಯೋಜಿಸಿದೆ. ಮೇ 27ರಂದು ಸಂಗ್ರಹಿಸಲಾದ ಉಪಗ್ರಹ ಚಿತ್ರಗಳು ಇದನ್ನು ದೃಢಪಡಿಸಿವೆ.

ಟಿಬೆಟ್‌ನ 2ನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣದಲ್ಲಿ 6 ಚೀನೀ ವಾಯುಪಡೆಯ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳ ಉಪಸ್ಥಿತಿಯನ್ನು ಉಪಗ್ರಹ ಚಿತ್ರವು ಬಹಿರಂಗಪಡಿಸುತ್ತದೆ. ಈ ವಿಮಾನ ನಿಲ್ದಾಣವು ಸುಮಾರು ಸಮುದ್ರಮಟ್ಟದಿಂದ 12,408 ಅಡಿಗಳಷ್ಟು ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಸದ್ಯ ಜೆ-20 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವ ಬಗ್ಗೆ ಭಾರತೀಯ ವಾಯುಪಡೆ ಗಮನಕ್ಕೆ ಬಂದಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement. Scroll to continue reading.

ಜೆ-20 ಸ್ಟೆಲ್ತ್ ಫೈಟರ್ ಜೆಟ್‌ನ ವಿಶೇಷತೆ ಏನು?
ಮೈಟಿ ಡ್ರ‍್ಯಾಗನ್ ಎಂದೂ ಕರೆಯಲ್ಪಡುವ, ಡಬಲ್ ಇಂಜಿನ್ ಸಾಮರ್ಥ್ಯದ ಜೆ-20 ಸ್ಟೆಲ್ತ್ ಫೈಟರ್ ಜೆಟ್ ಅನ್ನು 2017ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಜೆ-20 ಸ್ಟೆಲ್ತ್ ಯುದ್ಧ ವಿಮಾನವು ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ಭದ್ರತೆಗೆ ಇವುಗಳನ್ನು ನಿಯೋಜಿಸಿದೆ. ಈ ವಿಮಾನಗಳು ಇದೀಗ ಟಿಬೆಟ್‌ನ ಶಿಗಾಟ್ಸೆ ಮತ್ತು ಭಾರತೀಯ ಗಡಿ ಸಮೀಪದಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ. ಇವು ಭಾರತ ನಿಯೋಜಿಸಿರುವ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಲಿವೆ. ಚೀನಾ ಒಟ್ಟು 250 ಸ್ಟೆಲ್ತ್ ಫೈಟರ್‌ಗಳನ್ನು ಹೊಂದಿರಬಹುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಟಿಬೆಟ್‌ನಗರದಲ್ಲಿ ಚೀನಾ ಜೆ-20 ಯುದ್ಧ ವಿಮಾನ ನಿಯೋಜನೆ ಮಾಡಿರುವುದು ಇದೇ ಮೊದಲೇನಲ್ಲ. 2020 ಮತ್ತು 2023ರ ಸಂದರ್ಭದಲ್ಲೂ ಚೀನಾದ ಹೊಟಾನ್ ಪ್ರಾಂತ್ಯದ ಕ್ಸಿನ್‌ಜಿಯಾಂಗ್‌ನಲ್ಲಿ ಜೆಟ್‌ಗಳನ್ನು ನಿಯೋಜಿಸಲಾಗಿತ್ತು.

ಕಳೆದ 5 ವರ್ಷಗಳಲ್ಲಿ ಟಿಬೆಟ್ ಮತ್ತು ಭಾರತದ ಗಡಿ ಭಾಗಗಳಲ್ಲಿ ಚೀನಾ ವ್ಯವಸ್ಥಿತವಾಗಿ ತನ್ನ ವಾಯುಶಕ್ತಿ ಸಾಮರ್ಥ್ಯವನ್ನು ನಿಯೋಜಿಸುತ್ತಾ ಬಂದಿದೆ. ಹೊಸ ವಾಯುನೆಲೆಗಳನ್ನು ನಿರ್ಮಿಸಿದ್ದು, ಅಸ್ತಿತ್ವದಲ್ಲಿರುವ ವಾಯುನೆಲೆಗಳಿಗೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಇದರೊಂದಿಗೆ ಚೀನಾ ಜೆ-20 ಮತ್ತು ಹೆಚ್-6 ಪರಮಾಣು ಬಾಂಬರ್‌ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಿಗೆ ನಿಯೋಜಿಸಲು ಪ್ರಾರಂಭಿಸಿದೆ ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!