Connect with us

Hi, what are you looking for?

Diksoochi News

ರಾಷ್ಟ್ರೀಯ

ಜೂನ್ 4ರಂದು ಹೊಸ ಯುಗ ಆರಂಭ: ಎಂಕೆ ಸ್ಟಾಲಿನ್

0

ಚೆನ್ನೈ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಶನಿವಾರ ನಡೆಯುತ್ತಿದೆ. ಸಂಜೆ ವೇಳೆಗೆ ಮತದಾನ ಮುಕ್ತಾಯಗೊಳ್ಳುವುದರೊಂದಿಗೆ ಏಳು ಹಂತಗಳ 2024ರ ಸಾರ್ವತ್ರಿಕ ಚುನಾವಣೆಗೆ ಅಧಿಕೃತವಾಗಿ ತೆರೆ ಬಿಳಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣಗಳೆರಡೂ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿವೆ. ಆದರೆ ಅಂತಿಮವಾಗಿ ಜನರ ತೀರ್ಪು ಯಾರ ಪರ ಎಂಬುದು ಜೂನ್ 4 ರಂದು ತಿಳಿಯಲಿದೆ.

ಏತನ್ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಜೂನ್ 4 ಇಂಡಿಯಾದ ಹೊಸ ಯುಗದ ಆರಂಭವನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಸ್ಟಾಲಿನ್ ಅವರು ಮುಂದಿನ ಕ್ರಮದ ಕುರಿತು ಇಂಡಿಯಾ ಬ್ಲಾಕ್ ನಾಯಕರು ಇಂದು ಸಭೆ ನಡೆಸುತ್ತಿದ್ದು, ಡಿಎಂಕೆ ಪರವಾಗಿ ಪಕ್ಷದ ಖಜಾಂಚಿ ಮತ್ತು ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು ಅವರು ಭಾಗವಹಿಸುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದರು.

Advertisement. Scroll to continue reading.

“ಇಂಡಿಯಾ ಬ್ಲಾಕ್ ವಿಜಯದ ತುತ್ತತುದಿಯಲ್ಲಿ ನಿಂತಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ.

ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ಹತ್ತು ವರ್ಷಗಳ ಆಡಳಿತವನ್ನು ಕೊನೆಗೊಳಿಸುವುದು ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಯ ಹಿಂದಿನ ಗುರಿಯಾಗಿದೆ. ಇದನ್ನು ಸಾಧಿಸಲಾಗಿದೆ ಎಂದು ತೋರುತ್ತಿದೆ. ಬಿಜೆಪಿಗೆ ಸವಾಲು ಹಾಕಲು ಯಾವುದೇ ವಿರೋಧವಿಲ್ಲ ಎಂದು ಭಾವಿಸಿದ್ದ ಬಿಜೆಪಿ ವಿರುದ್ಧ ಪ್ರಜಾಸತ್ತಾತ್ಮಕ ಶಕ್ತಿಗಳ ಅಸಾಧಾರಣ ಒಕ್ಕೂಟವನ್ನು ಒಟ್ಟುಗೂಡಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದವು. ಈ ಮೈತ್ರಿ ಈಗ ದೇಶದ ಜನತೆಯಲ್ಲಿ ಭರವಸೆ ಮೂಡಿಸಿದೆ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

ಅವಿರತ ಪ್ರಚಾರದ ಮೂಲಕ ಇಂಡಿಯಾ ಬಣದ ನಾಯಕರು ಸಾರ್ವಜನಿಕ ವಲಯದಲ್ಲಿ ಬಿಜೆಪಿ ಸೃಷ್ಟಿಸಿದ್ದ ಸುಳ್ಳಿನ ಕಂತೆಯನ್ನು ಕಿತ್ತೊಗೆದಿದ್ದಾರೆ. ಮತ ಎಣಿಕೆಗೆ ಇನ್ನು ಕೇವಲ ಮೂರು ದಿನಗಳು ಬಾಕಿಯಿದ್ದು, ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸ್ಟಾಲಿನ್ ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ದುಬೈ : ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್...

ಸಿನಿಮಾ

0 ಬೆಂಗಳೂರು : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ , ಅವರ ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿಗೆ 6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ...

error: Content is protected !!