ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಜೂನ್ 1 ರಂದು ಮುಕ್ತಾಯವಾಗಿದೆ. ಕೆಲವು ಮಾಧ್ಯಮಗಳು ತಮ್ಮ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ. ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ದಕ್ಷಿಣ ಭಾರತದ ಹಲವು ಸ್ಥಾನಗಳಲ್ಲಿ ಕಮಾಲ್ ಮಾಡುವಂತಿದೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಹೇಳಿದೆ.
ಎಲ್ಲಿ? ಎಷ್ಟು?
ಕರ್ನಾಟಕದಲ್ಲಿ ಬಿಜೆಪಿ ಕಮಾಲ್ ಮಾಡಲಿದೆ. ಕಾಂಗ್ರೆಸ್ 3 ರಿಂದ 5 ಸ್ಥಾನಗಳನ್ನು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್‌ಡಿಎ 23 ರಿಂದ 25 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ.
I.N.D.I.A. 41.8% ಮತ ಹಂಚಿಕೆಯನ್ನು ಬಿಜೆಪಿ 54.2% ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ತೆಲಂಗಾಣದಲ್ಲಿ NDA ಮತ್ತು I.N.D.I.A ಎರಡೂ ಆಗಿ ನೆಕ್ ಅಂಡ್ ನೆಕ್ ಫೈಟ್ ನೀಡಲಿವೆ. ಎರಡು ಮೈತ್ರಿಕೂಟಗಳು 7 ರಿಂದ 9 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. AIMIM ತನ್ನ ಒಂದು ಸ್ಥಾನವನ್ನು ಪಡೆದುಕೊಳ್ಳಬಹುದು. ಐ.ಎನ್.ಡಿ.ಐ.ಎ. 38.6% ಮತ ಹಂಚಿಕೆಯನ್ನು ಬಿಜೆಪಿ 33%, BRS 20.3% ಮತ್ತು AIMIM 2% ಮತ ಹಂಚಿಕೆ ಪಡೆಯಲಿದೆ.
ಆಂಧ್ರಪ್ರದೇಶದಲ್ಲಿ ಇಂಡಿಯಾ ಮೈತ್ರಿ ಕೂಟ ಮಕಾಡೆ ಮಲಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಹೆಚ್ಚು ಸ್ಥಾನ ಪಡೆಯಲಿಸೆ. ಬಿಜೆಪಿಗೆ 21 ರಿಂದ 25, ಸ್ಥಾನಗಳನ್ನು ಗಳಿಸಲಿದೆ. ವೈಎಸ್‌ಆರ್‌ಸಿಪಿಗೆ 0 ಯಿಂದ 4 ಸ್ಥಾನಗಳನ್ನು ಗೆಲ್ಲಲಿದೆ. ಇಂಡಿಯಾ ಒಕ್ಕೂಟ 3.3% ಮತ ಹಂಚಿಕೆಯನ್ನು ಬಿಜೆಪಿ 52.9% ಮತ್ತು YSRCP 41.7% ಮತ ಹಂಚಿಕೆ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನ ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಾರ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟವು 37 ರಿಂದ 39 ಸ್ಥಾನಗಳನ್ನು ಗಳಿಸಬಹುದು. ಬಿಜೆಪಿಯು 0 ರಿಂದ 2 ಸ್ಥಾನಗಳನ್ನು ಪಡೆಯಬಹುದು.
ಕೇರಳದಲ್ಲಿ ಕಾಂಗ್ರೆಸ್ 17 ರಿಂದ 19, ಎನ್‌ಡಿಎ 1 ರಿಂದ 3 ಸ್ಥಾನಗಳನ್ನು ಗಳಿಸಬಹುದು. ಎಲ್‌ಡಿಎಫ್ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನಲಾಗಿದೆ.
25 ಈಶಾನ್ಯ ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ 3 ರಿಂದ 7, ಎನ್‌ಡಿಎಗೆ 16 ರಿಂದ 21 ಸ್ಥಾನ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.