ರಾಮೋಜಿ ಫಿಲ್ಮ್ ಸಿಟಿ ನಿರ್ಮಾತೃ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರು ಇಂದು (ಜೂನ್ 8) ನಿಧರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಹಲವು ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು.
1996ರಲ್ಲಿ ರಾಮೋಜಿ ಫಿಲ್ಮ್ ಸಿಟಿಯನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್‌ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ. ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Advertisement. Scroll to continue reading.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ.
ರಾಮೋಜಿ ರಾವ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Advertisement. Scroll to continue reading.