ಕಾಪು : ಬೈಕ್‌ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕಾಪು ರಾ.ಹೆ.66 ರಲ್ಲಿ ಅಪಘಾತ ಸಂಭವಿಸಿದ್ದು ಬಡಾಗ್ರಾಮದ ರಿತೇಶ್ ದೇವಾಡಿಗ(36) ಮೃತಪಟ್ಟಿದ್ದಾರೆ.
ನಿನ್ನೆ ಮಧ್ಯಾಹ್ನ ಮಂಗಳೂರು ಉಡುಪಿ ರಸ್ತೆಯಲ್ಲಿ ಕೆಮ್ತೂರಿಗೆ ಹೊರಟಿದ್ದ ರಿತೇಶ್ ಬೈಕ್ ಗೆ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೊರಟಿದ್ದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ರಿತೇಶ ಬೈಕ್ ಸಹಿತ ರಸ್ತೆಗೆ ಬಿದ್ದು, ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಅಂಬುಲೆನ್ಸ್ ಚಾಲಕ ಶಿವಪ್ರಸಾದನ ಅತೀವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಅಲ್ಲದೇ ರಾ.ಹೆ 66 ರ ಉಡುಪಿ-ಮಂಗಳೂರು ರಸ್ತೆಯನ್ನು ಅವೈಜ್ಞಾನಿಕವಾಗಿ ಕಿತ್ತುಹಾಕಿ ಹಲವು ದಿನಗಳು ಕಳೆದರು ಕೂಡ ರಸ್ತೆಯನ್ನು ದುರಸ್ತಿ ಮಾಡದೇ ಇರುವುದೂ ಅಪಘಾತಕ್ಕೆ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

