ಉಡುಪಿ : ಅಮೃತ ಭಾರತಿ ಪ್ರೌಢಶಾಲಾ ವಸತಿ ನಿಲಯದ ವಿದ್ಯಾರ್ಥಿಗಳ ಪೋಷಕರ ಬೈಠಕ್ ನಡೆಯಿತು.
ಈ ಸಂದರ್ಭ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿ, ಭಾರತೀಯ ಚಿಂತನೆ ಮತ್ತು ಹಿಂದುತ್ವದ ಕಲ್ಪನೆಯನ್ನು , ಸಮರ್ಪಣಾ ಮನೋಭಾವದಿಂದ ಕೂಡಿದ ಮನಸ್ಥಿತಿಯನ್ನು ನಿರ್ಮಿಸಲು ಸಂಸ್ಥೆಯನ್ನು ನಿರ್ಮಿಸಲಾಗಿದೆ. ಮಾನವೀಯತೆಯ ಗುಣ ಮತ್ತು ನೈತಿಕ ಮೌಲ್ಯವನ್ನು ಆಧಾರವಾಗಿಟ್ಟುಕೊಂಡು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದರು.
ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟ್ ಸದಸ್ಯ, ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್, ವಸತಿ ನಿಲಯದ ಮೇಲ್ವಿಚಾರಕ ಶಂಕರ್ ಸಿಂಗ್, ಶಿವಕುಮಾರ್ ಉಪಸ್ಥಿತರಿದ್ದರು.
Advertisement. Scroll to continue reading.
ಅಪರ್ಣಾ ಆಚಾರ್ ಪ್ರಾಸ್ತಾವಿಕ ನುಡಿದರು. ಮಹೇಶ್ ಹೈಕಾಡಿ ನಿರೂಪಿಸಿದರು.