ನವದೆಹಲಿ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳವಾರ ಮತ್ತೊಂದು ಪ್ರಮುಖ ಸಾಧನೆ ಮಾಡಿದೆ. ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ Aditya-L1 ನೌಕೆ ತನ್ನ ಮೊದಲ halo orbit ಪ್ರದಕ್ಷಿಣೆ ಪೂರ್ಣಗೊಳಿಸಿದೆ.
ಆದಿತ್ಯ-L1 ಮಿಷನ್ ಲಗ್ರಾಂಜಿಯನ್ ಪಾಯಿಂಟ್ L1 ನಲ್ಲಿ ಭಾರತದ ಮೊದಲ ಸೌರ ವೀಕ್ಷಣಾಲಯವಾಗಿದ್ದು, ಇದನ್ನು ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿತ್ತು.
ನೌಕೆಯು ಅದರ ಉದ್ದೇಶಿತ ಹಾಲೋ (L-1) ಕಕ್ಷೆಯಲ್ಲಿ ಜನವರಿ 6, 2024 ರಂದು ಸೇರಿತ್ತು. ಹ್ಯಾಲೋ ಕಕ್ಷೆಯಲ್ಲಿರುವ ಆದಿತ್ಯ-L1 ಬಾಹ್ಯಾಕಾಶ ನೌಕೆಯು ತನ್ನ ಹ್ಯಾಲೋ ಆರ್ಬಿಟ್ ಪೂರ್ಣಗೊಳಿಸಲು ಭರ್ತಿ 178 ದಿನಗಳನ್ನು ತೆಗೆದುಕೊಂಡಿದೆ.
ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ”ಇಂದು, ಆದಿತ್ಯ-L1 ನೌಕೆ ಸೂರ್ಯ-ಭೂಮಿಯ L1 ಬಿಂದುವಿನ ಸುತ್ತ ತನ್ನ ಮೊದಲ ಹಾಲೋ ಕಕ್ಷೆ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿದೆ.
Advertisement. Scroll to continue reading.
ಇಂದಿನ ಸ್ಟೇಷನ್ ಕೀಪಿಂಗ್ ಕುಶಲತೆಯು ಅದರ ತಡೆರಹಿತ ಪರಿವರ್ತನೆಯನ್ನು ಎರಡನೇ ಹಾಲೋ ಕಕ್ಷೆಗೆ ಖಾತ್ರಿಪಡಿಸಿದೆ ಎಂದು ಟ್ವೀಟ್ ಮಾಡಿದೆ.