ಉಡುಪಿ : ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂಡಳಿ ಹಾಗೂ ಪಠ್ಯ ಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಶ್ರೀಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೋಶಾಧಿಕಾರಿ ಪ್ರವೀಣ್ ಕುಮಾರ್, ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ, ಉಪಪ್ರಾಂಶುಪಾಲೆ ಡಾ.ಒಲಿವಿಟಾ ಡಿ’ಸೋಜಾ, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥೆ ಶ್ರೀಲಕ್ಷ್ಮೀ ಉಡುಪಿ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ನಿಶ್ಮಿತಾ ಶೆಟ್ಟಿ, ಕಾಲೇಜು ವಿದ್ಯಾರ್ಥಿ ಪ್ರತಿನಿಧಿ ಐಶ್ವರ್ಯ ಪಂಡಿತ್, ಪ್ರೌಢಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರತಿನಿಧಿ ವೈಷ್ಣವಿ ವಿ., ಪ್ರೌಢಶಾಲಾ ಆಂಗ್ಲ ಮಾಧ್ಯಮ ಪ್ರತಿನಿಧಿ ರೋಶ್ನಿ ಎಸ್. ಎರ್ಮಾಳ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ವಂದಿಸಿದರು. ಕನ್ನಡ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ :
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ರಾಜ್ಯಕ್ಕೆ 11 ನೇ ರ್‍ಯಾಂಕ್ ಗಳಿಸಿರುವ ದಶಮಿ ಎನ್., ಕರ್ನಾಟಕ ವಿದ್ಯಾವರ್ಧಕ ಅಕಾಡೆಮಿಯಿಂದ ವಿದ್ಯಾಸಿರಿ ಪ್ರಶಸ್ತಿ ಪಡೆದಿರುವ ಶರಣ್ ಶೇಷಾದ್ರಿ,
ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಜ್ಯಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಅದ್ವಿತಾ ನಾವಡರನ್ನು ಸನ್ಮಾನಿಸಲಾಯಿತು. ಇದೇ ವೇಳೆ
ಗಣಪತಿ ಪ್ರೌಢಶಾಲೆ ಪಡುಬಿದ್ರೆಯ ಹಳೆ ವಿದ್ಯಾರ್ಥಿಗಳಾದ ನಟರಾಜ್ ಮತ್ತು ತಂಡವು ಕನ್ನಡ ಮಾಧ್ಯಮದಲ್ಲಿ 625 ಕ್ಕೆ 618 ಅಂಕ ಗಳಿಸಿರುವ ಲಕ್ಷ್ಮಣ ವಶಿಷ್ಟ ಪೂಜಾರಿಗೆ 60,000 ರೂ.ನೀಡಿ ಸನ್ಮಾನಿಸಿದರು.