ಹಾವಂಜೆ : ಮುಗ್ಗೇರಿಯ ಕಿರಿಸೇತುವೆ ಬಳಿ ಶಿವಲಿಂಗವೊಂದು ಪತ್ತೆಯಾಗಿದೆ. 2 ಫೀಟ್ ಅಗಲದ ಸುತ್ತಳತೆಯ ಶಿವಲಿಂಗವೊಂದು ಸೇತುವೆ ಕೆಳಭಾಗದಲ್ಲಿ ಕಂಡುಬಂದಿದೆ. ಪಕ್ಕದಲ್ಲಿ ಮುಗೇರಿ ಮಠ ಇದ್ದು, ಅನತಿ ದೂರದಲ್ಲಿ ಹಾವಂಜೆ ಮಾಹಲಿಂಗೇಶ್ವರ ದೇವಸ್ಥಾನವೂ ಇದೆ. ಹಾಗಾಗಿ ಇದು ಅಲ್ಲಿಗೆ ಸಂಬಂಧ ಪಟ್ಟಂತಹ ಲಿಂಗವೇ ಎಂಬ ಸಂಶಯವಿದೆ ಎಂದು ಸ್ಥಳೀಯರಾದ ಶೇಖರ ಶೆಟ್ಟಿ, ಹಾಗೂ ಜಯ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಈ ಶಿವಲಿಂಗ ಕಂಡುಬಂದಿದೆ ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.