ಹಿರಿಯಡಕ : ಕೊಡಮಣಿತ್ತಾಯ ಫ್ರೆಂಡ್ಸ್ ಕ್ರಿಕೇಟರ್ಸ್ ವರ್ವಾಡಿ ಆಶ್ರಯದಲ್ಲಿ 13ನೇ ವರ್ಷದ 90 ಗಜಗಳ ಕ್ರಿಕೆಟ್ ಪಂದ್ಯಾಟ ವಿಲೇಜ್ ಟ್ರೋಫಿ – 2021 ವರ್ವಾಡಿಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ವಾಡಿ ದೊಡ್ಡಮನೆಯ ಸುಹಾಸ್ ಹೆಗ್ಡೆ ವಹಿಸಿದ್ದರು. ಈ ಸಂದರ್ಭ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಕಳಕಳಿ ಮೆರೆದ ಆಶಾ ಕಾರ್ಯಕರ್ತೆ ರಾಜೇವಿ ಪೆರ್ಣಂಕಿಲರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ವಿಜೇತ ತಂಡ ಅನುಗ್ರಹ ದೆಂದೂರ್ ( ತಂಡದ ಪ್ರಾಯೋಜಕರು ಅಭಿ ದೆಂದೂರ್), ರನ್ನರ್ಸ್ ತಂಡ ತೊಕೊಳಿ ಪ್ರೆಂಡ್ಸ್(ತಂಡದ ಪ್ರಾಯೋಜಕರು ರಾಯ್ ದೇಸಾ) ಇವರಿಗೆ ಈ ವೇಳೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ ಎಫ್ ಸಿ ವರ್ವಾಡಿಯ ಅಧ್ಯಕ್ಷ ಸದಾನಂದ ಪೂಜಾರಿ, ಕೊಡಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸದಾನಂದ ಪ್ರಭು, ಕೊಡಿಬೆಟ್ಟು ಗ್ರಾ.ಪಂ.ಸದಸ್ಯರುಗಳಾದ ಸಹನಾ ಜಯಪ್ರಕಾಶ್ ನಾಯಕ್, ರಾಮ ನಾಯಕ್, ಸಂತೋಷ್ ಶೆಟ್ಟಿ, ಉದ್ಯಮಿ ಚರಣ್ ವಿಠ್ಠಲ್, ಉದ್ಯಮಿ ಸತೀಶ್ ಗೌಡ, ಜಗದೀಶ್ ಶೆಟ್ಟಿ, ರವಿ ಪೂಜಾರಿ, ರಾಜ್ ಕುಮಾರ್, ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.