Connect with us

Hi, what are you looking for?

Diksoochi News

Uncategorized

ಕಣ್ಣೇ ಅದಿರಿಂಧಿ…ಎಂದ ಮಂಗ್ಲಿ ಮೇಲೆ ಎಲ್ಲರ ಕಣ್ಣು!

0

ಈಗ ಗಾಯಕಿ ಮಂಗ್ಲಿಯದೇ ಹಾಡು ಎಲ್ಲೆಡೆ ಮೊಳಗುತ್ತಿದೆ. ಕಣ್ಣೇ ಅದಿರಿಂಧಿ ಎಂದ ಮಂಗ್ಲಿಯ ದನಿಗೆ ಎಲ್ಲರೂ ಫಿದಾ ಆಗಿದ್ದಾರೆ. ರಾಬರ್ಟ್ ಚಿತ್ರದ ಕಣ್ಣಾ ಹೊಡಿಯೋಕಾ' ಹಾಡು ತೆಲುಗಿನಲ್ಲಿಕಣ್ಣೆ ಅದಿರಿಂಧಿ’ ಆಗಿ ಮೂಡಿ ಬಂದಿದ್ದು, ಈ ಹಾಡು ಸಕತ್ ಕ್ಲಿಕ್ ಆಗಿದೆ. ಈ ಹಾಡನ್ನು ಹಾಡಿರುವ ಮಂಗ್ಲಿಗೆ ಜೈ ಅಂದಿದ್ದಾರೆ ಮಂದಿ…ಸತ್ಯವತಿ ರಾಥೋಡ್ ಟಾಲಿವುಡ್ ನಲ್ಲಿ ಮಂಗ್ಲಿಯಾಗಿ ಫೇಮಸ್. ರಾಬರ್ಟ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಂಗ್ಲಿ ಈ ಹಾಡನ್ನು ಹಾಡಿರುವ ತುಣುಕು ವೈರಲ್ ಆಗಿದೆ.


ಅಂದಹಾಗೆ ಕನ್ನಡದಲ್ಲಿ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ಶ್ರೇಯಾ ಘೋಷಲ್ ಹಾಡಿದ್ದಾರೆ. ತೆಲುಗಿನಲ್ಲಿ ಕಸರ್ಲಾ ಶ್ಯಾಮ್ ಹಾಡು ಬರೆದಿದ್ದು ಮಂಗ್ಲಿ ದನಿಯಾಗಿದ್ದಾರೆ. ಈಗಾಗಗಲೇ ಎರಡು ಭಾಷೆಯ ಲಿರಿಕಲ್ ವೀಡಿಯೋ ರಿಲೀಸ್ ಆಗಿ ಕ್ಲಿಕ್ ಆಗಿವೆ. ಮಂಗ್ಲಿ ಜಾನಪದ, ಭಕ್ತಿಗೀತೆ, ಜವಾರಿ ಹಾಡುಗಳನ್ನು ಹಾಡಿದ್ದು, ಅಲಾ ವೈಕುಂಠಪುರಂಲೋ ಚಿತ್ರದ ರಾಮುಲು ರಾಮುಲು ಹಾಡು ಕ್ಲಿಕ್ ಆಗಿದೆ. ಅದು ಬಿಟ್ಟರೆ ಇದೀಗ ರಾಬರ್ಟ್ ಚಿತ್ರದ ಈ ಹಾಡು 26 ವರ್ಷದ ಮಂಗ್ಲಿಗೆ ಹೆಸರು ತಂದಿದೆ.


ಇನ್ನೇನು ಮಾರ್ಚ್ 11 ರಂದು ಚಿತ್ರ ತೆರೆಗೆ ಬರಲಿದ್ದು, ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಗೆ ಆಶಾ ಭಟ್ ನಾಯಕಿ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದು ಚಿತ್ರ ಈಗಾಗಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!