ಶಿವಮೊಗ್ಗ :ಮಹಾನಗರ ಪಾಲಿಕೆಯ ಮೇಯರ್ ಆಗಿ ಸುನೀತಾ ಅಣ್ಣಪ್ಪ ಹಾಗೂ ಉಪಮೇಯರ್ ಆಗಿ ಶಂಕರ್ ಗನ್ನಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನ ಸುನೀತಾ ಅಣ್ಣಪ್ಪ ಕೈ ಸೇರಿದುದರಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಚುಕ್ಕಾಣಿಯು ಸತತ ಮೂರನೇ ಬಾರಿಗೆ ಮಹಿಳೆಯ ಕೈ ಸೇರಿದೆ.
ಮೇಯರ್ ಸ್ಥಾನಕ್ಕೆ ಸುನೀತಾ ಅಣ್ಣಪ್ಪನವರ ಹೆಸರು ನಿಗದಿಯಾಗಿತ್ತು. ಆದರೆ, ಉಪಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗಳಲ್ಲಿ ಪೈಪೋಟಿ ಇತ್ತು. ಕೊನೆಗೆ ಶಂಕರ್ ಗನ್ನಿ ಹೆಸರು ಅಂತಿಮಗೊಳಿಸಲಾಗಿತ್ತು. ಮೇಯರ್ ಸ್ಥಾನವು ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಇನ್ನು ಕಾಂಗ್ರೆಸ್‍ನಿಂದ ರೇಖಾ ರಂಗನಾಥ್ ಮತ್ತು ಆರ್.ಸಿ.ನಾಯ್ಕ್ ಕಣಕ್ಕಿಳಿದಿದ್ದು ಪರಾಜಿತರಾಗಿದ್ದಾರೆ.