ಬ್ರಹ್ಮಾವರ: ಹಿಂದೂ ಸಮಾಜದಲ್ಲಿ ಧರ್ಮ ಮತ್ತು ದೇವರ ಆಚರಣೆ ನಂಬಿಕೆಗಳು ಹೆಚ್ಚುವಂತೆ ಮಾಡಲು ಭಜನೆಗಳು ಸಹಕಾರಿಯಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಗುರುವಾರ ಬಾರಕೂರು ಬಳಿಯ ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 18 ನೇ ವರ್ಷದ ಭಜನಾ ಮಂಗಲೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತೀ ಒಂದು ಊರಿನ ದೇವಸ್ಥಾನಗಳಲ್ಲಿ ಚಿಕ್ಕ ಮಕ್ಕಳಿಗೆ ಭಜನಾ ಸಂಸ್ಕøತಿಯನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ .ಕೆಲವು ಭಾಗದಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಇಂದು ಮಾದಕ ವ್ಯಸನಿಗಳು ಆಗುತ್ತಿರುವುದು ಸಮಾಜಕ್ಕೆ ಮಾರಕವಾಗುತ್ತಿದೆ. ಆ ಕುರಿತು ಪೋಷಕರು ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೂರಾಡಿಯ ಬಿ.ಎಂ. ಎಂ. ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರಾದ ಗೋಪಾಲ್ ಆಚಾರ್ಯ ಬಂಡೀಮಠ , ಬಾಬು ನಾಯ್ಕ್ ಕೂಡ್ಲಿ , ಭಜನಾ ಕ್ಷೇತ್ರದ ಸಾಧಕಿ ಮಾಯಾ ಕಾಮತ್ ರನ್ನು ಸನ್ಮಾನಿಸಲಾಯಿತು.
ಕೂರಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶೇಖರ ಹೆಗ್ಡೆ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ , ಕೂರಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜೋರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಥ್ ಹೆಗ್ಡೆ , ಕದಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಪೃಥ್ವಿ ರಾಜ್ ಶೆಟ್ಟಿ , ಹನೆಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ದೇವಸ್ಥಾನದ ಅರ್ಚಕ ರಾಮಚಂದ್ರ ಉಪಾಧ್ಯಾಯ, ಭಜನಾ ಮಂಡಳಿಯ ಕೀರ್ತೀ ಪ್ರಸಾದ್, ಜಯಂತಿ ನಾಯ್ಕ್ ,ಹನೆಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರ ಮರಕಾಲ, ಮಲ್ಲಿಕಾ ಪೂಜಾರ್ತಿ, ಜಾನಕಿ ,ಗಣೇಶ್ ಭಟ್ ನಾಯರ್ ಬೆಟ್ಟು, ನಿವೃತ್ತ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ, ಶಿಕ್ಷಕರಾದ ಮೂರ್ತಿ ರಾವ್ , ವಿಶ್ವನಾಥ್ ಎಂ. ಉಪಸ್ಥಿತರಿದ್ದರು.
ರಾಘವೇಂದ್ರ ಅಲೆಯ ಸ್ವಾಗತಿಸಿ, ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.