ಹಿರಿಯಡಕ : ವಿದ್ಯಾರ್ಥಿಗಳು ಪೊಲೀಸ್ ಕೆಡೆಟ್ ಸದಸ್ಯರಾಗಿ ಶಿಸ್ತು, ಸಂಯಮ ಮತ್ತು ಶಿಕ್ಷಕರೊಂದಿಗೆ ವಿಧೇಯತೆಯಿಂದ ನಡೆಯುತ್ತ ವಿದ್ಯೆ ಕಲಿಯಿರಿ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ, ತಂದೆ – ತಾಯಿಯರ ಬಗ್ಗೆ ಗೌರವ ಭಾವನೆ ಹೊಂದಿದರೆ ಮಾತ್ರ ಉತ್ತಮ ವಿದ್ಯಾವಂತ ಪ್ರಜೆಗಳಾಗಲು ಸಾಧ್ಯ ಎಂದು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಲತಾ ಶೇರಿಗಾರ್ ಹೇಳಿದರು.
ಅವರು ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ರಾಜ್ಯ ಪೋಲಿಸ್ ಇಲಾಖೆ ವತಿಯಿಂದ ನಡೆಸಲ್ಪಡುವ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಘಟಕ ಉದ್ಟಾಟಿಸಿ ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೊಮ್ಮಾರಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಪ್ರೇಮಾ ಎಸ್. ನಾಯಕ್, ಎಸ್. ಡಿ. ಎಮ್. ಸಿ ಉಪಾಧ್ಯಕ್ಷರಾದ ಶ್ರೀ ದೇವರಾಜ್ ಶಾಸ್ತ್ರೀ , ವಿದ್ಯಾರ್ಥಿ ಪೊಲೀಸ್ ಕೆಡೆಟ್ ಘಟಕದ ಮಾರ್ಗದರ್ಶಿಗಳಾದ ಶ್ರೀ ಸಿದ್ಧಪ್ಪ, ಚಿತ್ರಕಲಾ ಶಿಕ್ಷಕರಾದ ಶ್ರೀ ಮೋಹನ್ ಕಡಬ, ಶ್ರೀರಾಮ, ಹಿರಿಯಡಕ ಪೋಲಿಸ್ ಠಾಣೆ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲೆ ಶ್ರೀಮತಿ ಶಾರದಾ ಎ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಘಟಕದ ಸಂಚಾಲಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅಬ್ದುಲ್ ಜಲೀಲ್ ವಂದಿಸಿದರು.
Please Support Us : Diksoochi Tv YouTube👇🏻👇🏻👇🏻
https://www.youtube.com/channel/UCdyqamlIaw9Mq3y6Giar9RQ/featured
Subscribe & Like ❤️