ಚಂದನವನ : ನಟಿ ಮಯೂರಿ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಯೂರಿ ಸಂತಸ ಹಂಚಿಕೊಂಡಿದ್ದಾರೆ. ಮಗುವಿನ ಕೈಯ ಫೋಟೋವನ್ನು ಹಂಚಿಕೊಂಡಿರುವ ಮಯೂರಿ, ಈ ಸುಂದರ ಅನುಭವನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಮತ್ತೊಂದು ಸುಂದರ ಪಯಣ ಪ್ರಾರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ಧನ್ಯವಾಗಳು ಎಂದು ಬರೆದಿದ್ದಾರೆ.
2020 ರ ಜೂನ್ ನಲ್ಲಿ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದರು ಮಯೂರಿ. ನಟ ಜೆಕೆ ತಂದೆ ತಾಯಿ ಮಯೂರಿಗೆ ಧಾರೆ ಎರೆದು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು.