ಉಡುಪಿ : ಎಮ್ ಐ ಟಿ ಕ್ಯಾಂಪಸ್ ನಲ್ಲಿ ಕೋವಿಡ್ 19 ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಕ್ಯಾಂಪಸ್ ನ 5000 ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದು ಉಡುಪಿ ಡಿಸಿ ಜಗದೀಶ್ ತಿಳಿಸಿದ್ದಾರೆ. ವೀಡಿಯೋ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಏರಿಕೆಯಾಗಿದ್ದು, ಈ ಪೈಕಿ ಎಂಐಟಿ ಕ್ಯಾಂಪಸ್ ನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಅಲ್ಲಿನ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಸೀಲ್ ಡೌನ್ ಮಾಡಿ, ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿದ್ದೇವೆ. ಇಲ್ಲಿ ನೇರ ತರಗತಿಗೆ ಅವಕಾಶವಿಲ್ಲ, ಆನ್ ಲೈನ್ ತರಗತಿಗಳನ್ನು ಮಾಡಬಹುದು. ಕ್ಯಾಂಪಸ್ ನ ವಿದ್ಯಾರ್ಥಿ ಗಳು ಹೊರ ಬರುವಂತಿಲ್ಲ ಎಂದು ಕ್ರಮ ಕೈಗೊಂಡಿದ್ದೇವೆ. ಜೊತೆಗೆ ವಿದ್ಯಾರ್ಥಿಗಳು ಮಣಿಪಾಲದ ಸುತ್ತ ಮುತ್ತ ಓಡಾಡಿರುವುದರಿಂದ ಸುತ್ತ ಮುತ್ತಲಿನ ಅಂಗಡಿ ವ್ಯಾಪಾರಸ್ಥರು, ಜನರು ಕೋವಿಡ್ ನಿಯಮ ಪಾಲಿಸಬೇಕೆಂದು ಅವರು ಹೇಳಿದ್ದಾರೆ.