Connect with us

Hi, what are you looking for?

Diksoochi News

Uncategorized

ಕಾಪು : ಹೊಸಮಾರಿಗುಡಿ ದೇವಸ್ಥಾನದಲ್ಲಿ ಶಿಲಾಸೇವೆ ಸಮರ್ಪಣೆ ಸಂಪನ್ನ  

0

ಕಾಪು : ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ದಾರಗೊಳ್ಳಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶಿಲಾ ಸೇವೆ ಸಮರ್ಪಣಾ ಕಾರ್ಯಕ್ರಮವು ಮಾ.23ರಂದು ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ, ವೇ.ಮೂ. ಕುಮಾರಗುರು ತಂತ್ರಿ ಮತ್ತು ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ಶಿಲಾ ಸೇವೆ ಸಮರ್ಪಣಾಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್,
ಉಡುಪಿ ಜಿಲ್ಲಾಧಿಕಾರಿ ಡಾ. ಜಿ. ಜಗದೀಶ್, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಗಣ್ಯರಾದ ಡಾ. ಬಿ. ಆರ್. ಶೆಟ್ಟಿ, ರವಿ ಸುಂದರ ಶೆಟ್ಟಿ, ಪ್ರಕಾಶ್ ಶೆಟ್ಟಿ ಬಂಜಾರ, ರಾಜಶೇಖರ ಕೋಟ್ಯಾನ್, ಅನಿಲ್ ಬಲ್ಲಾಳ್, ವಿಕ್ರಂ ಕಾಪು, ಧರ್ಮಪಾಲ ದೇವಾಡಿಗ, ಮಾನವ ಜೋಷಿ, ರತ್ನಾಕರ ಹೆಗ್ಡೆ, ವಿರಾರ್ ಶಂಕರ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ನಿರ್ಮಲ್ ಕುಮಾರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Advertisement. Scroll to continue reading.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ / ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ / ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾದವ ಆರ್. ಪಾಲನ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್ ಶೆಟ್ಟಿ ಕಾಪು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಂ., ರೇಣುಕಾ ದೇವಾಡಿಗ, ಶೈಲಜಾ ಪುರುಷೋತ್ತಮ್, ಬಾಬು ಮಲ್ಲಾರು, ಮಾರಿಗುಡಿಯ ಪಾತ್ರಿಗಳಾದ ಗುರು ಮೂರ್ತಿ, ಸಚಿನ್ ಪಾತ್ರಿ ಮೊದಲಾದವರು ಉಪಸ್ಥಿತರಿದ್ದರು.

ಕರಾವಳಿಯ ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಂಘ – ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಸ್ವಾಗತಿಸಿದರು. ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು. ಗಂಗಾಧರ ಸುವರ್ಣ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು, ಅರ್ಪಿತಾ ಪಿ. ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ಶಿಲಾ ಸೇವೆ ಸಮರ್ಪಣೆಗೆ ನಿರಂತರ ಅವಕಾಶ : ಕೆ. ವಾಸುದೇವ ಶೆಟ್ಟಿ

ಕೋವಿಡ್ ಸಂಬಂಧಿ ಸಕಲ ಮುನ್ನೆಚ್ಚರಿಕಾ ವ್ಯವಸ್ಥೆಗಳೊಂದಿಗೆ ಬೆಳಗ್ಗೆ 9.59ಕ್ಕೆ ಶಿಲಾ ಸೇವೆ ಸಮರ್ಪಣೆಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಮಾ. 24ರಂದು ಸಂಜೆ 6 ಗಂಟೆಯವರೆಗೆ ಸರತಿ ಸಾಲಿನಲ್ಲಿ ಬಂದು ಶಿಲಾ ಸೇವೆ ಸಮರ್ಪಿಸ ಬಹುದಾಗಿದೆ. ಶಿಲಾ ಸೇವೆ ಸಮರ್ಪಣೆಗಾಗಿ ನವದುರ್ಗೆಯರ ಹೆಸರಿನಲ್ಲಿ ೯ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಭಕ್ತರು ಕೌಂಟರ್‌ನಿಂದ ಶಿಲಾಸೇವೆಯ ರಶೀದಿಯನ್ನು ಪಡೆದುಕೊಂಡು, ಭಕ್ತರಿಗೆ ದೇವಿಯ ದರ್ಶನ, ನಿಧಿ ಕುಂಭ ದರ್ಶನ, ಶಿಲಾಸೇವೆ ಅರ್ಪಣೆಯ ಜೊತೆಗೆ ಪುಷ್ಪಾರ್ಚನೆಗೆ ವ್ಯವಸ್ಥೆ ಮಾಡಲಾಗಿದೆ. ಶಿಲಾ ಸೇವೆ ನೀಡುವ ಭಕ್ತರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಕ್ಷೇತ್ರಕ್ಕೆ ಬರಬೇಕಿದ್ದು, ಸಾಮಾಜಿಕ ಅಂತರ ಪಾಲನೆಯೊಂದಿಗೆ ಸರತಿ-ಸಾಲಿಗಾಗಿ ಉತ್ತಮ ವ್ಯವಸ್ಥೆ ಮಾಡಲಾಗಿದೆ.ವಒಂದು ಶಿಲಾ ಸೇವೆಗೆ ರೂ 999/-, 9 ಶಿಲಾ ಸೇವೆಗೆ ರೂ. 9999/-, 99 ಶಿಲಾಸೇವೆಗೆ ರೂ. 99,999/- ಮತ್ತು 999 ಶಿಲಾ ಸೇವೆಗೆ 99,99,999 ರೂ. ನಿಗದಿ ಪಡಿಸಲಾಗಿದೆ. ವರ್ಷಪೂರ್ತಿ ಶಿಲಾ ಸೇವೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಪ್ರತೀಯೊಬ್ಬ ಭಕ್ತಾಧಿಗಳೂ ತಮ್ಮ ಹೆಸರಿನಲ್ಲಿ ಕನಿಷ್ಠ 1 ಶಿಲಾ ಸೇವೆಯನ್ನು ಅಮ್ಮನ ಸನ್ನಿಧಾನಕ್ಕೆ ನೀಡಬೇಕೆನ್ನುವುದು ಸಮಿತಿಯ ಸಂಕಲ್ಪವಾಗಿದೆ ಎಂದು ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!