ಪತಿ – ಪತ್ನಿ ಜಗಳ; ಮನೆಗೆ ಬೆಂಕಿ ಹಚ್ಚಿದ ಪತಿ: 6 ಮಂದಿ ಸಜೀವ ದಹನ
Published
0
ಕೊಡಗು : ದಂಪತಿಗಳ ನಡುವಿನ ಜಗಳದಿಂದಾಗಿ ಆರು ಮಂದಿ ಸಜೀವ ದಹನವಾದ ಘಟನೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಬೇಬಿ, ಸೀತೆ, ವಿಶ್ವಾಸ್, ಪ್ರಾರ್ಥನಾ, ಪ್ರಕಾಶ್ ಮೃತ ದುರ್ದೈವಿಗಳು. ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಉಂಟಾದ ಜಗಳದಲ್ಲಿ ಬೇಬಿ ಎಂಬವರ ಪತಿ ಎರವರ ಬೋಜ ಎಂಬಾತನು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. . ಮೂವರು ಮನೆಯಲ್ಲೇ ಸಜೀವ ದಹನವಾದರೆ, ಮತ್ತೆ ಮೂವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆರೋಪಿಯು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.