Connect with us

Hi, what are you looking for?

Diksoochi News

Uncategorized

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಬಾಲಿವುಡ್ ನಟಿ ವಿಧಿವಶ

0

ಬಾಲಿವುಡ್ : ಹಿರಿಯ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. 100ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಶಶಿಕಲಾ ನಟಿಸಿದ್ದಾರೆ. 1932 ಆಗಸ್ಟ್ 4 ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದರು. ಡಾಕು, ಜುಗ್ನು, ಆರತಿ, ಗುಮ್ರಾ, ಮುಜ್ಸೆ ಶಾದಿ ಕರೋಗೆ, ರಹಗೀರ್ ಚಿತ್ರದಲ್ಲಿ ಶಶಿಕಲಾ ನಟಿಸಿದ ಪಾತ್ರಗಳು ಜನಪ್ರಿಯವಾಗಿವೆ. ಜೊತೆಗೆ ಟಿ ಕಾರ್ಯಕ್ರಮಗಳನ್ನು ಮಾಡಿರುವ ಅವರು ಸೋನ್ ಪರಿ ಮತ್ತು ಜೀನಾ ಇಸೀ ಕಾ ನಾಮ್ ಹೇ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದರು. 1962 ರ ಆರತಿ, 1963ರ ಗುಮ್ರಾ ಚಿತ್ರದ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದರು. 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!