Connect with us

Hi, what are you looking for?

Diksoochi News

Uncategorized

ಐಪಿಎಲ್ 2021: ಹೈದರಾಬಾದ್ ವಿರುದ್ಧ 10 ರನ್ ಗಳ ರೋಚಕ ಜಯ ಸಾಧಿಸಿದ ಕೊಲ್ಕತ್ತಾ

0

ಐಪಿಎಲ್ 14ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆದ್ದು ಬೀಗಿದೆ. 10 ರನ್ ಗಳ ರೋಚಕ ಗೆಲುವಿನ ಮೂಲಕ ಇಯಾಣ್ ಮಾರ್ಗನ್ ಬಳಗ ಟೂರ್ನಿಯಲ್ಲಿ ಶುಭಾರಂಭಿಸಿದೆ.


ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 187 ರನ್ ಗಳಿಸಿತು. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ತಲಾ ಅರ್ಧ ಶತಕ ಭಾರಿಸಿ ದೊಡ್ಡ ಮೊತ್ತ ಕಲೆ ಹಾಕಲು ಕಾರಣೀಭೂತರಾದರು. ಮೊತ್ತದ ಬೆನ್ನಟ್ಟಿದ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹಾರ ವಿಕೆಟ್ ಒಪ್ಪಿಸಿ ಆಘಾತ ಅನುಭವಿಸಿತು. ಜಾನಿ ಬೈರ್ ಸ್ಟೋವ್ ಹಾಗೂ ಮನೀಶ್ ಪಾಂಡೆ ಜತೆಯಾಟವಾಡಿ ತಲಾ ಅರ್ಧ ಶತಕ ಸಿಡಿಸಿದರಾದರೂ ಗೆಲುವು ದಕ್ಕಲಿಲ್ಲ. 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!