ಹೊಸ ಮಾರ್ಗಸೂಚಿ : ಮದುವೆಗೆ 100, ಅಂತ್ಯಸಂಸ್ಕಾರಕ್ಕೆ 25 ಮಂದಿಗೆ ಮಾತ್ರ ಅವಕಾಶ
Published
0
ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮಕ್ಕೆ200 ಜನರಿಗೆ ಅವಕಾಶ ನೀಡಲಾಗಿದೆ ಕಲ್ಯಾಣ ಮಂಟಪ ಮತ್ತು ಹಾಲ್ ಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹುಟ್ಟುಹಬ್ಬ ಇತರ ಕಾರ್ಯಕ್ರಮಗಳಲ್ಲಿ 50 ಜನ ಸೇರಲು ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರಕ್ಕೆ 25 ಜನರು ಮಾತ್ರ ಸೇರಬಹುದು ಎಂದು ಹೇಳಲಾಗಿದೆ. ನಿಯಮ ಉಲ್ಲಂಘಿಸಿದರೆ ಎನ್.ಡಿ.ಎಂ.ಎ. ಅಡಿ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.