ಕೋಟ: ಕೋವಿಡ್ ೧೯ ಎರಡನೆ ಅಲೆ ವಿಪರೀತಗೊಂಡ ಹಿನ್ನೆಲೆಯಲ್ಲಿ ರಾಜ್ಯಸರಕಾರ ಗುರುವಾರ ಅಪರಾಹ್ನ ಕಠಿಣ ಕ್ರಮ ತೆಗೆದುಕೊಂಡಿತ್ತು. ಹೀಗಾಗಿ ಹಿನ್ನಲೆಯಲ್ಲಿ ಶುಕ್ರವಾರ ಬ್ರಹ್ಮಾವರ ಖಡಕ್ ತಹಶೀಲ್ದಾರ್ ಎಂಬ ಹೆಗ್ಗಳಿಕೆ ಪಡೆದಿರುವ ಕಿರಣ್ ಗೌರಯ್ಯ ಬ್ರಹ್ಮಾವರ ವಿವಿಧ ಭಾಗಗಳು ಹಾಗೂ ಕೋಟ ಸೇರಿದಂತೆ ಕೆಲವು ಭಾಗಗಳಿಗೆ ದಿಢೀರ್ ದಾಳಿ ನಡೆಸಿ ತೆರೆದಿರುವ ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಇನ್ನುಳಿದ ಅಂಗಡಿ ,ಹೋಟೆಲ್,ಸೀಲ್ಕ್ ಮಳಿಗಳಿಗೆ ಕಾಲ್ನಡಿಗೆ ಮೂಲಕ ದಾಳಿ ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿದಕ್ಕೆ ಖಡಕ್ ಎಚ್ಚರಿಗೆ ನೀಡಿ ಬಂದ್ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೋಟ ಪೇಟೆಯ ಪ್ರಸಿದ್ಧ ಹೋಟೆಲ್, ಬಟ್ಟೆ ಮಳಿಗಳು ಬಂದ್ ಮಾಡಿ ಒಳಗೆ ವ್ಯವಹರಿಸುವ ಮಾಲಿಕರ ವಿರುದ್ಧ ಹರಿಹಾಯ್ದರು. ಮಾಸ್ಕ್ ಹಾಕದಿದ್ದವರಿಗೆ ಖಡಕ್ ಎಚ್ಚರಿಗೆ ನೀಡಿದರು.
ಮಾನವೀಯತೆ ನಮ್ಮಗೂ ಗೊತು ರೀ
ಕೋಟ ಪೇಟೆಯ ಹೋಟೆಲ್ ಹಾಗೂ ಬಟ್ಟೆ ಮಳಿಗೆಗಳಿಗೆ ದಾಳಿ ಮಾಡುವ ಸಂದರ್ಭದಲ್ಲಿ ತಹಶೀಲ್ದಾರ್ ಗೆ ಮಾನವೀಯತೆಯ ಪಾಠ ಹೇಳಲು ಮಾಲೀಕರು ಪ್ರಾರಂಭಿಸಿದರು. ಆಗ ತಹಶೀಲ್ದಾರ್ ಮಾತನಾಡಿ, ಮಾನವೀಯತೆಯ ಬಗ್ಗೆ ನಮ್ಮಗೆ ಗೊತ್ತು ರೀ ಮೊದಲು ಸರಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ ಹೋಟೆಲ್ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದನ್ನು ಮಾಡಿ ಅದನ್ನು ಬಿಟ್ಟು ಕುಳ್ಳಿರಿಸಿ ಊಟ ,ತಿಂಡಿ ನೀಡುತ್ತಿದ್ದೀರಿ. ನಿಮಗೆ ರೂಲ್ಸ್ ಗೊತ್ತಿಲ್ವಾ ಎಂದು ಎಚ್ಚರಿಸಿದರು.
ವರದಿ : ದಿನೇಶ್ ರಾಯಪ್ಪನಮಠ