ಉಡುಪಿ : ಕೊರೋನಾ ಆರ್ಭಟ ಹೆಚ್ಚುತ್ತಿತುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಹೊರತಾಗಿ ಮತ್ತೆಲ್ಲವೂ ಬಂದ್ ಮಾಡಬೇಕು. ಉಡುಪಿಯಲ್ಲಿ ಕರ್ಫ್ಯೂ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜನ ಸಂಚಾರ ವಿರಳವಾಗಿದೆ. ಮಾಲ್ ಗಳು, ಬಟ್ಟೆ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಮಾರ್ಗಸೂಚಿ ಅನ್ವಯ ಹೋಟೆಲ್ ತೆರೆಯಬಹುದು. ಪಾರ್ಸೆಲ್ ಗಷ್ಟೇ ಅವಕಾಶ. ಆದರೆ, ಕೆಲವು ಹೊಟೇಲ್ ಗಳೂ ಇಂದು ತೆರೆದಿಲ್ಲ.