ಕುಂದಾಪುರ: ವೀಕೆಂಡ್ ಕರ್ಫ್ಯೂ ಗೆ ಕುಂದಾಪುರ ಜನತೆಯಿಂದ ಉತ್ತಮ ಸ್ಪಂದನೆ ದೊರಕಿತು. ನಗರದಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರಕಾರದ ನಿಯಮಕ್ಕೆ ತಲೆ ಬಾಗಿದರು.
ಶನಿವಾರ ಸಂತೆ ಸ್ಥಗಿತ
ನಗರದಲ್ಲಿ ಶನಿವಾರ ನಡೆಯುತ್ತಿದ್ದ ಸಂತೆಯೂ ಸ್ಥಗಿತಗೊಂಡಿದ್ದು, ಜನರು ಬೆಳಿಗ್ಗೆಯೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿ ಮನೆ ಸೇರಿದರು. ಬೆಳಿಗ್ಗೆ ೧೦ ಗಂಟೆಯ ನಂತರ ಕುಂದಾಪುರ ಪೇಟೆ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ನಗರದ ಶಾಸ್ತಿ ವೃತ್ತ ಹಾಗೂ ಸಂಗಮ್ ಜಂಕ್ಷನ್ ಬಳಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಅನಗತ್ಯ ಓಡಾಟ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಯಾನಿಟೈಸ್
ಕುಂದಾಪುರ ಪುರಸಭೆಯವರು ನಗರದ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿಗಳ ಮುಂಭಾಗ, ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ಕಡೆ ಸ್ಯಾನಿಟೈಸ್ ಮಾಡಿದರು.
ಎಸಿ ಭೇಟಿ
ವೀಕೆಂಡ್ ಕರ್ಫ್ಯೂ ನಲ್ಲಿ ತೆಗೆದುಕೊಳ್ಳಲಾದ ಮುಂಜಾಗ್ರತಾ ಕ್ರಮಗಳನ್ನು ಉಪ ವಿಭಾಗಾಧಿಕಾರಿ ಕೆ.ರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಡಿವೈಎಸ್ಪಿ ಶ್ರೀಕಾಂತ್, ನಗರ ಠಾಣಾಧಿಕಾರಿ ಸದಾಶಿವ ಗವರೋಜಿ ಉಪಸ್ಥಿತರಿದ್ದರು.
ವರದಿ : ದಿನೇಶ್ ರಾಯಪ್ಪನಮಠ