ಕರ್ನಾಟಕ ಕರೋನಾ ಸೋಂಕು ಮಹಾರಾಷ್ಟ್ರವನ್ನು ಮೀರಿಸುವತ್ತ ಹೊರಟಿದ್ದು, ಈ ಬಗ್ಗೆ ಮಂತ್ರಿಗಳ, ತಜ್ಞರ ಜೊತೆ ಚರ್ಚಿಸಿ ಕೆಲವು ನಿರ್ಧಾರಕ್ಕೆ ಬಂದಿದ್ದೇವೆ. 14 ದಿನಗಳ ಬಿಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ನಿತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ರಾತ್ರಿ ಕಫ್ರ್ಯೂ ಎಂದಿನಂತೆ ಮುಂದುವರೆಯಲಿದೆ ಎಂದಿದ್ದಾರೆ. ತಾಲೂಕು ತಹಶೀಲ್ದಾರ್ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಟ್ಟಡ ನಿರ್ಮಾಣ, ಕೃಷಿ, ವೈದ್ಯಕೀಯ ಸೇವೆ ಇರಲಿದೆ. ಗಾರ್ಮೆಂಟ್ಸ್ ಬಂದ್ ಇರಲಿದೆ. ಸಾರಿಗೆ ವ್ಯವಸ್ಥೆಯೂ ಇಲ್ಲ. ಸರಕು ಸಾಗಣಿಕೆಗೆ ಅವಕಾಶವಿದೆ ಎಂದಿದ್ದಾರೆ.
ಲಸಿಕೆ ಅಭಿಯಾನ ಮುಂದುವರಿಕೆ
ಮೇ 1 ರಿಂದ 18 ರಿಂದ 45 ವರ್ಷದದೊಳಗಿನವರಿಗೆ ಕೊರೊನಾ ಲಸಿಕೆ ಉಚಿತ ಲಸಿಕೆ ನೀಡಲಾಗುಉದು. ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ 65 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ಹೇಳಿದರು.
ಆಕ್ಸಿಜನ್ ಕೊರತೆ ಬರಲ್ಲ
ಇನ್ನು ಮುಂದಿನ ದಿನಗಳಲ್ಲಿ ಆಕ್ಸಜನ್ ಕೊರತೆ ಬರುವುದಿಲ್ಲ. ಕೇಂರ 800 ಮೆಟ್ರಿ ಟನ್ ಕೊಡಲಿದೆ. ರೆಮ್ಡಿಸಿವರ್ 1 ಲಕ್ಷ 20 ಸಾವಿರ ಪೂರೈಕೆ ಮಾಡಲು ಅನುಮತಿ ನೀಡಿದ ಎಂದರು.
ಎಲೆಕ್ಷನ್ ಗಳಿಲ್ಲ
ಎಲ್ಲಾ ಎಲೆಕ್ಷನ್ ಗಳನ್ನು ಮುಂದೂಡಲಾಗಿದೆ. ಮುಂದಿನ ನಾಲ್ಕು ತಿಂಗಳು ಚುನಾವಣೆ ನಡೆಯುವುದಿಲ್ಲ ಎಂದು ಸಿಎಂ ಶಿಫಾರಸ್ಸು ಮಾಡಿದ್ದಾರೆ.