ಉಡುಪಿ : ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. 14 ದಿನಗಳ ಕಾಲ ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗಷ್ಟೇ ದಿನಸಿ, ತರಕಾರಿ, ಮಾಂಸದಂಗಡಿಗಳನ್ನು ತೆರೆಯಲು ಅವಕಾಶವಿದೆ. ಹಾಗಾಗಿ ಅಂಗಡಿಗಳಲ್ಲಿ ಖರೀದಿಗೆ ಜನರು ಸರತಿ ಸಾಲಲ್ಲಿ ನಿಂತಿರುವ ದೃಶ್ಯ ಮುಂಜಾನೆಯಿಂದಲೇ ಕಂಡು ಬರುತ್ತಿದೆ. ಕಾರ್ಮಿಕರು ಕೆಲಸಕ್ಕಾಗಿ ಹೊರಟು ನಿಂತಿರುವ ದೃಶ್ಯ ಕಂಡು ಬಂತು.