Connect with us

Hi, what are you looking for?

Diksoochi News

Uncategorized

ಕೊರೋನಾ ನಿಯಂತ್ರಣಕ್ಕೆ ಬಿಗಿ ನಿಯಮ; ಉಡುಪಿಯಲ್ಲಿ ಜನಸಂಚಾರ ವಿರಳ

0

ಉಡುಪಿ : ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಎಲ್ಲಡೆ ಚಾಚುತ್ತಿದೆ, ಇತ್ತ ಉಡುಪಿಯೂ ಹಿಂದೆ ಬಿದ್ದಿಲ್ಲ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. 14 ದಿನಗಳ ಲಾಕ್ ಡೌನ್ ಘೋಷಿಸಿದೆ. ಮೊದಲ ದಿನವಾದ ಇಂದು ಉಡುಪಿಯಲ್ಲಿ ಜನ ಸಂಚಾರ ವಿರಳವಾಗಿತ್ತು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ಬಿಕೋ ಎನ್ನುತ್ತಿವೆ ರಸ್ತೆಗಳು

ಸರ್ಕಾರದ ಆದೇಶದ ಅನ್ವಯ ಬಸ್ಸ್ ಗಳು ಸಂಚಾರವಿಲ್ಲ. ಖಾಸಗೀ ಬಸ್ಸುಗಳು, ಸರ್ಕಾರಿ ಬಸ್ಸುಗಳು, ಆಟೋಗಳು ರಸ್ತೆಗಿಳಿದಿಲ್ಲ. ಇನ್ನು ಪೊಲೀಸ್ ಕಣ್ಗಾವಲು ಜಿಲ್ಲೆಯಾದ್ಯಂತ ಇದ್ದು, ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ಪಾರ್ಸೆಲ್ ಗೆ ಅವಕಾಶ

ಹೊಟೇಲ್, ಬಾರ್ ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ ನೀಡಲಾಗಿದೆ. ಕೆಲವೊಂದು ಹೊಟೇಲ್ ಗಳು ಮುಚ್ಚಿದ್ದು, ಕೆಲವು ಹೊಟೇಲ್ ಗಳಲ್ಲಿ ಪಾರ್ಸೆಲ್ ಗಳನ್ನು ನೀಡಲಾಗುತ್ತಿದೆ. ಇನ್ನು ಹೋಮ್ ಡೆಲಿವರಿಗೆ ಅವಕಾಶವಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!