ಉಡುಪಿ : ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಉಡುಪಿ ನಗರ ಹಾಗೂ ಕೆಎಂಸಿ ರಕ್ತನಿಧಿ ವಿಭಾಗ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಇಂದು ಮಣಿಪಾಲದಲ್ಲಿ ನಡೆಯಿತು.
ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ರಕ್ತದಾನ ಮಾಡಿದ ಎಲ್ಲಾ ದಾನಿಗಳನ್ನು ಅಭಿನಂದಿಸಿದರು. ಮೇ 1 ನಂತರ ಲಸಿಕೆ ಹಾಕಿಸಿಕೊಳ್ಳುವ ಮೊದಲು ಎಲ್ಲಾ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕಾಗಿ ವಿನಂತಿಸಿದರು. ಈ ಸಂದರ್ಭ ಸತೀಶ್ ಸಾಲಿಯಾನ್ ಹಾಗೂ ರಕ್ತನಿಧಿ ವಿಭಾಗದ ಪ್ರತಿನಿಧಿ ವಿಶ್ವೇಶ್ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ನಗರ ಅಧ್ಯಕ್ಷರಾದ ಮಹೇಶ್ ಠಾಕೋರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಯುವ ಮೋರ್ಚಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ ಶೆಟ್ಟಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಪ್ರಮುಖರಾದ ಗುರುಪ್ರಸಾದ್ ಶೆಟ್ಟಿ, ಆಪತ್ಬಾಂಧವ ಸತೀಶ್ ಸಾಲ್ಯಾನ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಶಾಂತ್ ಕುಮಾರ್, ನಿಧೀಶ್ ಶ್ರೀಯಾನ್, ಕಾರ್ಯದರ್ಶಿಗಳಾದ ಶ್ರೀವತ್ಸ, ಸಂದೇಶ ಪ್ರಭು, ತೆಂಕನಿಡಿಯೂರು ಯುವ ಮೋರ್ಚಾ ಅಧ್ಯಕ್ಷರಾದ ಸೂರಜ್ ಪೂಜಾರಿ, ಹೆರ್ಗ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಪ್ರವೀಣ್ ನಾಯಕ್ ನಿಖಿಲ್ ಮಡಿವಾಳ, ಗುರು ಮಡಿವಾಳ, ವಿಕ್ರಂ ಶಾನಭಾಗ್, ಕಾರ್ತಿಕ್ ಪಾಲನ್, ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ 62 ಯುನಿಟ್ ರಕ್ತ ಸಂಗ್ರಹವಾಯಿತು.