ಉಡುಪಿ : ವಿಪರೀತವಾಗಿ ಏರುತ್ತಿರುವ ಕೋರೋನಾ ಸೋಂಕಿಗೆ ಮುಕ್ತಿ ಹಾಕಲು ಕೋವ್ಯಾಕ್ಸಿನ್ ಒಂದೇ ಪರಿಹಾರವೆಂದು ನಂಬಲಾಗಿದೆ. ಹಾಗಾಗಿ ಎಲ್ಲೆಡೆ ಕೊರೋನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ನಡುವೆ ಅಜ್ಜರಕಾಡು ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಲಭಿಸುತ್ತಿಲ್ಲ. ಬೆಳಿಗ್ಗೆಯಿಂದಲೇ ಮಂದಿ ಆಸ್ಪತ್ರೆಯ ಮುಂಭಾಗ ಸರತಿ ಸಾಲಲ್ಲಿ ನಿಂತಿದ್ದಾರೆ. ಆದರೆ, ಎಷ್ಟು ಕಾದರೂ ಲಸಿಕೆ ನೀಡಲಾಗುತ್ತಿಲ್ಲ. ಸಿಬ್ಬಂದಿ ಅವರನ್ನು ವಾಪಾಸು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವ್ಯಾಕ್ಸಿನ್ ಖಾಲಿಯಾಗಿದೆ ಎಂದು ಸಿಬ್ಬಂದಿ ಹೇಳಿದ್ದು, ಜನ ಗಲಾಟೆ ಮಾಡುತ್ತಿದ್ದಾರೆ. ಮಾತಿನ ಚಕಮಕಿ ನಡೆದಿದೆ. ಬೆಳಿಗ್ಗೆ ಯಿಂದ ಬಂದು ಕಾದು ಸಮಯ ವ್ಯರ್ಥವಾಗುತ್ತಿದೆ. ಹೀಗಾದರೆ ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.