ಹೆಬ್ರಿ : ಮೀನು ವ್ಯಾಪಾರಿಯೊಬ್ಬರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮಹಾಬಲ ಮರಕಾಲ (68) ಅವರು ನಿನ್ನೆ ಸಂಜೆ ಕೊರೊನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೃತರು ಹಲವು ವರ್ಷಗಳಿಂದ ಹೆಬ್ರಿಯ 3 ರಸ್ತೆಯ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿಕೊಂಡು ಬರುತ್ತಿದ್ದರು. ಮೀನು ಮಾಬ್ಲಣ್ಣ ಎಂದೇ ಹೆಬ್ರಿ ಪರಿಸರದ ಜನರಿಗೆ ಚಿರಪರಿಚಿತರು. ಎರಡು ದಿನದ ಹಿಂದೆ ಇವರಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಕೊರೋನಾ ನಿಯಮದಂತೆ ಅವರ ಮೃತದೇಹವನ್ನು ಸುಡಲಾಯಿತು.
ವರದಿ : ಶ್ರೀದತ್ತ, ಹೆಬ್ರಿ
Advertisement. Scroll to continue reading.