Connect with us

Hi, what are you looking for?

Diksoochi News

Uncategorized

ಕುಂದಾಪುರ : ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳ ದಾಖಲಾತಿಗೆ ಮನವಿ ಸಲ್ಲಿಸಿದ ಪುರಸಭಾ ಸದಸ್ಯರು

0

ಕುಂದಾಪುರ : ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ದಾಖಾಲಾತಿ ಮಾಡಲು ಕುಂದಾಪುರ ಸಹಾಯಕ ಕಮಿಷನರ್ ರವರನ್ನು ಭೇಟಿ ಮಾಡಿ ಕಾಂಗ್ರೆಸ್ ಬೆಂಬಲಿತ ಕುಂದಾಪುರ ಪುರಸಭಾ ಸದಸ್ಯರು ಮನವಿ ನೀಡಿದರು. ಮನವಿಗೆ ಸ್ಪಂದಿಸಿದ ಸಹಾಯಕ ಕಮೀಷನರ್ ಮೂರು ನಾಲ್ಕು ದಿನಗಳಲ್ಲಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಒಳರೋಗಿಗಳ ದಾಖಾಲಾತಿ ಹಾಗೂ ಇತರೇ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಹಳೆ ಕಟ್ಟಡದಲ್ಲಿರುವ ಆಕ್ಸಿಜಿನ್ ಬೆಡ್ ಗಳನ್ನು ಹೊಸ ಕಟ್ಟಡಕ್ಕೆ ಶಿಪ್ಟ್ ಮಾಡಿ ಸಾರ್ವಜನಿಕರ ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.

ಈ ಸಂದರ್ಭ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಪಿ.ದೇವಕಿ ಸಣ್ಣಯ್ಯ,ಪುರಸಭಾ ಸದಸ್ಯರಾದ ಕೆ.ಜಿ.ನಿತ್ಯಾನಂದ, ಚಂದ್ರಶೇಖರ ಖಾರ್ವಿ, ಶ್ರೀಧರ ಸೇರಿಗಾರ್, ಅಬ್ಬು ಮಹಮ್ಮದ್,ಅಶ್ಪಾಕ್ ಕೋಡಿ ಉಪಸ್ಥಿತರಿದ್ದರು.

ವರದಿ : ದಿನೇಶ್ ರಾಯಪ್ಪನಮಠ

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!