ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ನಗರದ ಕೋವಿಡ್ ಆಸ್ಪತ್ರೆಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಕೊರೋನಾ ನಿಯಂತ್ರಣದ ಕುರಿತು ಸಮಗ್ರ ಮಾಹಿತಿ ಪಡೆದರು.
ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ೬೦ ವರ್ಷ ಹಾಗೂ ೪೫ ವರ್ಷ ಮೇಲ್ಪಟ್ಟವರಿಗೆ ಎರಡನೇ ಹಂತದ ಲಸಿಕೆ ನೀಡಲಾಗುತ್ತದೆ. ೧೮ ವರ್ಷ ಮೇಲ್ಪಟ್ಟವರು ಆನ್ ಲೈನ್ ಮೂಲಕ ರಿಜಿಶ್ಟ್ರೇಶನ್ ಮಾಡಿ, ಎರಡು ದಿನದೊಳಗೆ ಅವರಿಗೆ ಲಸಿಕೆ ನೀಡಲಾಗುತ್ತದೆ.
ಆ್ಯಂಬುಲೆನ್ಸ್ ಕೊರತೆ ಸದ್ಯಕ್ಕಿಲ್ಲ. ಆದರೆ ಖಾಸಗಿ ಆ್ಯಂಬುಲೆನ್ಸ್ ಗಳನ್ನು ಗುತ್ತಿಗೆ ಆಧರದಲ್ಲಿ ಪಡೆದುಕೊಳ್ಳಲು ಹೇಳಿದ್ದೇವೆ. ವೆಂಟಿಲೇಟರ್ ಇರುವ ಆ್ಯಂಬುಲೆನ್ಸ್ ಬಗ್ಗೆ ಎರಡು ದಿನದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ.
ಏನೇ ಸಮಸ್ಯೆ ಬಂದರೂ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಶಾಸಕರ ಕ್ವಾರಂಟೈನ್ ಅವಧಿ ಮುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಕೆ.ರಾಜು, ತಹಶೀಲ್ದಾರ್ ಆನಂದಪ್ಪ ನಾಯಕ್, ಭಾಜಪ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ರಾಜ್ಯ ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆ ಸದಸ್ಯ ಮೋಹನ್ ದಾಸ್ ಶೆಣೈ, ಡಾ| ನಾಗೇಶ್, ಡಾ| ರಾಬರ್ಟ್, ಜಿ.ಪ್ರ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು.