ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲೆಯಲ್ಲಿ ಕೊರೋನ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿದ್ದರೂ ಕೂಡಾ ಬ್ರಹ್ಮಾವರದಲ್ಲಿ ನಡೆಯುವ ಸೋಮವಾರ ಸಂತೆಗೆ ನಿರ್ಬಂದ ಇದ್ದರೂ ದೂರದ ಜಿಲ್ಲೆಯಿಂದ ಹಣ್ಣು ತರಕಾರಿ ಮತ್ತು ದಿನಸಿಯನ್ನು ಟೆಂಪೋ ಮೂಲಕ ತಂದು ಮಾರುಕಟ್ಟೆಯ ಬಳಿ ಇರಿಸಿ ವ್ಯಾಪಾರ ಮಾಡಲು ಆರಂಭಿಸಿದವರನ್ನು ಇಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ತಂಡದವರು ತೆರವು ಮಾಡಿಸಿದರು.
ಸ್ಥಳಿಯರು ಇಲ್ಲಿ ಸಂತೆ ವ್ಯಾಪಾರ ಮಾಡುವವರು ಮತ್ತು ಖಾಯಂ ನೆಲೆಸಿ ಅಂಗಡಿಯಲ್ಲಿ ಹಣ್ಣು ತರಕಾರಿ ಮಾರುವವರು ಇಲ್ಲಿನ ಮುಖಂಡರಾದ ರಾಜೇಶ್ ಶೆಟ್ಟಿ ಬಿರ್ತಿಯವರಲ್ಲಿ ವಿಷಯ ತಿಳಿಸಿ ಅವರು ಘಟನೆಯ ಸ್ಥಳಕ್ಕೆ ಆಗಮಿಸಿ ವ್ಯಾಪಾರ ನಿಲುಗಡೆ ಮಾಡುವಂತೆ ಮನವಿ ಮಾಡಿದರೂ ಹೊರ ಜಿಲ್ಲೆಯಿಂದ ಬಂದವರು ವ್ಯಾಪಾರ ಮುಂದುವರಿಸುತ್ತಲೆ ಇದ್ದಾಗ ಇಲ್ಲಿನ ಪೋಲೀಸರ ಮೂಲಕ ವ್ಯಾಪಾಲ ನಿಲುಗಡೆ ಮಾಡಲಾಯಿತು.
ಈ ಸಂದರ್ಬ ರಸ್ತೆಯಲ್ಲಿ ಜನರ ಮತ್ತು ವಾಹನಗಳ ಜುಂಗುಳಿಯಿಂದ ಕೆಲಹೊತ್ತು ರಸ್ತೆ ಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬ್ರಹ್ಮಾವರ ಠಾಣೆಯ ಏ.ಎಸ್ .ಐ. ಶಾಂತರಾಜ್ , ಸುಂದರ್ , ನಾರಾಯಣ್ ಮತ್ತು ವಾರಂಬಳ್ಳಿ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನ್ನಿತರರು ಕಾರ್ಯಾಚರಣೆಯಲ್ಲಿದ್ದರು.