ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಇಂದು ಬರೋಬ್ಬರಿ 49,058 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 328 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲೇ 33, 706 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 17,90,10ದಕ್ಕೆ ಏರಿಕೆಯಾಗಿದ್ದು, 12,55,797 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 139 ಮಂದಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದು, ಒಟ್ಟು ರಾಜ್ಯದಲ್ಲಿ ಈ ವರೆಗೆ 17,212 ಮಂದಿ ಬಲಿಯಾಗಿದ್ದಾರೆ.
ಕರಾವಳಿಯಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು
ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿದೆ. ದ.ಕ ಜಿಲ್ಲೆಯಲ್ಲಿ ಇಂದು 1,191 ಕೊರೋನಾ ಸೋಂಕು ದೃಢಪಟ್ಟಿದ್ದರೆ, ಉಡುಪಿಯಲ್ಲಿ 1,526 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 734 ಮಂದಿಗೆ ಕೊರೋನಾ ದೃಢ ಪಟ್ಟಿದೆ.
ಉಳಿದಂತೆ ಶಿವಮೊಗ್ಗ 635, ಯಾದಗಿರಿ 721, ವಿಜಯಪುರ 662, ರಾಮನಗರ 414, ರಾಯಚೂರು 819, ಮೈಸೂರಿನಲ್ಲಿ 2,531, ಮಂಡ್ಯ 1,301, ಕೋಲಾರ 756,ಕೊಪ್ಪಳ 357, ಕಲ್ಬುರ್ಗಿ 1652, ಹಾಸನ 1403, ಹಾವೇರಿ 236, ದಾವಣಗೆರೆ 672, ಧಾರವಾಡ 824, ಗದಗ 191,ಚಿತ್ರದುರ್ಗ 126, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452 ಕೇಸ್ ಪತ್ತೆಯಾಗಿದೆ. ಬಾಗಲಕೋಟೆಯಲ್ಲಿ 655, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬಳ್ಳಾರಿ 922, ಚಾಮರಾಜ ನಗರ 707, ಕೊಡಗಿನಲ್ಲಿ 697, ಮಂಡ್ಯದಲ್ಲಿ 1301 ಮಂದಿಗೆ ಕೊರೋನಾ ದೃಢಪಟ್ಟಿದೆ.