ಕಾಪು : ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ತಮ್ಮದೇ ಸರಕಾರದ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆಯುವ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿ ಹಾಗೂ ವೈಫಲ್ಯವನ್ನು ಮರೆಮಾಚಲು ಕೋವಿಡ್ ವಾರ್ ರೂಂ ನಂ 214 ಸಿಬ್ಬಂದಿಗಳ ಪೈಕಿ ಕೇವಲ ಅಲ್ಪಸಂಖ್ಯಾತರ 17 ಜನರ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಉಲ್ಲೇಖಿಸಿ ಮತೀಯ ಬಣ್ಣ ಕೊಡಲು ಬಹುದೊಡ್ಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಆರೋಪಿದ್ದಾರೆ. ಮತ್ತು ಸಂಸದರ ನಡೆಯನ್ನು ಖಂಡಿಸಿದ್ದಾರೆ.
214 ವಾರ್ ರೂಮ್ ಸಿಬ್ಬಂದಿಗಳೆಲ್ಲರೂ ಹೊರಗುತ್ತಿಗೆ ಏಜೆನ್ಸಿ ಮುಖಾಂತರ ಸರಕಾರ ಹಾಗೂ ಬಿಬಿಎಂಪಿ ಕರೆದ ಟೆಂಡರ್ ಮೂಲಕ ನೇಮಕಗೊಂಡ ಕ್ರಿಸ್ಟಲ್ ಇನ್ಫೋಸಿಸ್ಟಮ್ ಸರ್ವಿಸಸ್ ಎಂಬ ಹೆಸರಿನ ಸಂಸ್ಥೆಯ
ಸಿಬ್ಬಂದಿಗಳಾಗಿದ್ದು,ನೀವು ವಾರ್ ರೂಮಿಗೆ ದಾಳಿ ನಡೆಸಿ ಮೇಲ್ವಿಚಾರಕರ ಮೂಲಕ 214 ಜನರಲ್ಲಿ 17 ಜನರ ಹೆಸರನ್ನು ಕೇಳಿ ಪಡೆದು,”ಇವರನ್ನು ನೀವು ಬಿಬಿಎಂಪಿ ವಾರ್ ರೂಮ್ ಗೆ ಯಾಕೆ ನೇಮಕಗೊಳಿಸಿದ್ದೀರಿ ? ಇದು ಏನು ಮದ್ರಸ ಅಥವಾ ವಕ್ಪ್ ಬೋರ್ಡ್ ಕಮಿಟಿಯ ಎಂದು ಪ್ರಶ್ನಿಸಿರುವ ನಿಮಗೆ ದೇಶದಾದ್ಯಂತ ಎಷ್ಟು ಮದರಸಗಳು ಮಸೀದಿಗಳು ಆಸ್ಪತ್ರೆಗಳಾಗಿ ಮಾರ್ಪಟ್ಟಿದೆ ಎಂದು ತಿಳಿದಿದೆಯೇ ಎಂದು ಶರ್ಫುದ್ದೀನ್ ಪ್ರಶ್ನಿಸಿದ್ದಾರೆ.
ಪವಿತ್ರ ರಂಝಾನ್ ತಿಂಗಳಲ್ಲಿ ಮುಸಲ್ಮಾನರು ಪ್ರತಿಯೊಂದು ನಮಾಝನ್ನು ಮನೆಯಲ್ಲೇ ನಿರ್ವಹಿಸಿ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು,ಕೋವಿಡ್ ನಲ್ಲಿ ಮೃತಪಟ್ಟವರ ಮನೆಯವರು ಶವ ಸಂಸ್ಕಾರ ನಡೆಸಲು ಹಿಂಜರಿದಾಗ,ಜಾತಿ ಧರ್ಮಗಳನ್ನು ಬದಿಗಿಟ್ಟು ಅದೆಷ್ಟೋ ಮುಸ್ಲಿಂ ಸಂಘಟನೆಗಳು ಅವರವರ ಜಾತಿಗೆ ಅನುಗುಣವಾಗಿ ಶವಸಂಸ್ಕಾರ ಮಾಡಿಕೊಡುವ ಮೂಲಕ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂತಹ ಸಮಯದಲ್ಲಿ ತಮ್ಮ ಈ ನಡವಳಿಕೆ ತಮಗೆ ಶೋಭೆ ತರುವಂತದ್ದಲ್ಲ.
ಓರ್ವ ಜವಾಬ್ದಾರಿಯುತ ಸಂಸದರರಾಗಿರುವ ತಾವು ಇಂತಹ ಸಮಯದಲ್ಲಿ ಜನರಿಗೆ ಅತ್ಯಗತ್ಯವಿರುವ
ಔಷಧಿಗಳು, ಆಕ್ಸಿಜನ್, ಆಸ್ಪತ್ರೆ ಬೆಡ್ ಗಳ ಬಗ್ಗೆ ಯೋಚಿಸಿ ಕೊರೋನ ಮಹಾಮಾರಿಯನ್ನು ದೇಶದಿಂದ ಒದ್ದೋಡಿಸುವ ಕೆಲಸ ನಿರ್ವಹಿಸಬೇಕೇ ಹೊರತು
ಸೌಹಾರ್ದತೆಯನ್ನು ಕೆಡಿಸಿ ಕೋಮುವಾದ ಸೃಷ್ಟಿಸಿ
ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡಬೇಡಿ. ಏಕೆಂದರೆ ಜನರು ಕೂಡ ಬುದ್ಧಿವಂತರಾಗಿದ್ದಾರೆ ನಿಮ್ಮ ಡ್ರಾಮಾ ಇನ್ನು ಮುಂದೆ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜನರು ನಿಮಗೆ ಬುದ್ಧಿ ಕಲಿಸಲು ತಯಾರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.